Breaking News

3 ಹೊಸ ಬಸ್ ಗಳಿಗೆ ಶಾಸಕ ಎನ್.ಎಚ್.ಕೋನರಡ್ಡಿ ಚಾಲನೆ

ನವಲಗುಂದ : ಪ್ರಯಾಣಿಕರ ಅನುಕೂಲಕ್ಕಾಗಿ ವಾಯುವ್ಯ ಸಾರಿಗೆ ಸಂಸ್ಥೆಯ ನವಲಗುಂದ ಘಟಕಕ್ಕೆ ಪ್ರತಿನಿತ್ಯ ಸಂಚರಿಸಲು 3 ಹೊಸ ಬಸ್ ಗಳಿಗೆ ಶಾಸಕ ಎನ್.ಎಚ್.ಕೋನರಡ್ಡಿ ಚಾಲನೆ ನೀಡಿದರು.

ನಂತರ ಮಾತನಾಡಿದ ಅವರು, ಕ್ಷೇತ್ರದ ಹಲವಾರು ಗ್ರಾಮಸ್ಥರು ತಮ್ಮ ಹಳ್ಳಿಗಳಿಗೆ ಬಸ ಬಿಡುವಂತೆ ಜನಸಂಪರ್ಕ ಸಭೆಯಲ್ಲಿ ಮನವಿಯನ್ನು ಸಲ್ಲಿಸಿದ್ದರು. ಮನವಿಗೆ ಸ್ಪಂದಿಸಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರು ಹಾಗೂ ಸಾರಿಗೆ ಇಲಾಖೆ ಸಚಿವರಾದ ರಾಮಲಿಂಗರೆಡ್ಡಿ ಅವರ ಗಮನಕ್ಕೆ ತಂದು ನವಲಗುಂದ ಘಟಕಕ್ಕೆ ಹೊಸ ಬಸ್‌ ಬಿಡಲು ಈ ಹಿಂದೆ ಮನವಿ ಸಲ್ಲಿಸಲಾಗಿತ್ತು.

ಅದರಂತೆ 3 ಬಸ್‌ಗಳನ್ನು ಸಾರ್ವಜನಿಕರ ಸಂಚಾರಕ್ಕೆ ಮುಕ್ತಗೊಳಿಸಲಾಗಿದೆ ಎಂದರು. ಈ ಹಿಂದೆ ಫೆಬ್ರವರಿಯಲ್ಲಿ ಸಿಎಂ ಸಿದ್ದರಾಮಯ್ಯ ನವಲಗುಂದ ಮತಕ್ಷೇತ್ರದಲ್ಲಿ 12 ಹೊಸ ಬಸ್ಸಗಳನ್ನು ನೀಡಿದ್ದರು ಎಂದು ಕಾರ್ಯಕ್ರಮದಲ್ಲಿ ಸ್ಮರಿಸಿದರು.

ಈ ವೇಳೆ ಘಟಕದ ವ್ಯವಸ್ಥಾಪಕರಾದ ಅಶೋಕ ಕಾಡದಕೊಪ್ಪ ಮತ್ತು ಎಂ.ಎಸ್.ಕಳಸದ, ಕಂಟ್ರೋಲರ್ ಎಸ್‌.ಎಂ.ಬರಮಗೌಡರ, ಉಸ್ಮಾನ ಬಬರ್ಚಿ, ಲಕ್ಷ್ಮಣ ಹಳ್ಳದ, ಮದರಸಾಬ ಉಗರಗೋಳ, ಅಡಿವೆಪ್ಪ ಇತರರು ಉಪಸ್ಥಿತರಿದ್ದರು.

Share News

About bigtvnews22

Check Also

ಶಿಶು ಅಭಿವೃದ್ಧಿ ಯೋಜನಾಧಿಕಾರಿಯಿಂದ ಲೈಂಗಿಕ ದೌರ್ಜನ್ಯ: ಮಹಿಳಾ ವಾರ್ಡನ್‌ ದೂರು

ಬೆಳಗಾವಿ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಶಿಶು ಅಭಿವೃದ್ಧಿ ಯೋಜನಾಧಿಕಾರಿಯೊಬ್ಬರು ತನಗೆ ಲೈಂಗಿಕ ಕಿರುಕುಳ ನೀಡಿದ್ದಾರೆ, ಜನಾಂಗೀಯ ನಿಂದಣೆ …

Leave a Reply

Your email address will not be published. Required fields are marked *