Breaking News

ನೈರುತ್ಯ ರೈಲ್ವೆ ಆಡಳಿತಾತ್ಮಕ ‘ಎಂಜಿನ್’ ಫೇಲ್.. ಡಿಎಆರ್ ಎಕ್ಸಾಂ ತಪ್ಪಿದವರಿಗೆ ಇನ್ನೊಂದ್ಸಾರಿ ಚಾನ್ಸ್..

ಧಾರವಾಡ ಬಳಿ ನಡೆದಿದ್ದ ಒಂದ್ ಘಟನೆ ಉತ್ತರಕರ್ನಾಟಕದ ಸಾವಿರಾರು ಯುವಕರ ಸರ್ಕಾರಿ ನೌಕರಿ ಪಡೆಯೋ ಅವಕಾಶಕ್ಕೆ ಕಲ್ಲು ಹಾಕಿತ್ತು. ಕರ್ತವ್ಯ ಪ್ರಜ್ಞೆಯಿಲ್ಲದಂತೆ ರೈಲ್ವೆ ಇಲಾಖೆ ಅಧಿಕಾರಿಗಳು ವರ್ತಿಸಿದ್ರಿಂದಾಗಿ ಯುವಕರು ರಾತ್ರಿಯಿಡೀ ನಿದ್ದೆಗೆಟ್ಟಿದ್ರಲ್ಲದೇ, ತಾವ್ ತಪ್ರು ಮಾಡದೇ ಅವಕಾಶ ಕಳ್ಕೊಂಡು ಕೈಕೈ ಹಿಸುಕಿಕೊಳ್ತಿದ್ರು. ಆದ್ರೇ, ರಾಜ್ಯ ಸರ್ಕಾರ ಅಷ್ಟೇ ಬೇಗ ಸ್ಪಂದಿಸಿ, ಯುವಕರ ಮೊಗದಲ್ಲಿ ಮಂದಹಾಸ ಮೂಡಿಸಿತು. ಅಷ್ಟಕ್ಕೂ ಆಗಿರೋದೇನು, ಇಲ್ಲಿದೆ ನೋಡಿ.
ಸಮಯ ಬೆೆಳಗ್ಗೆ 6 ಗಂಟೆ. ಹುಬ್ಬಳ್ಳಿಯ ನೈರುತ್ಯ ರೈಲ್ವೆಯ ಕೇಂದ್ರ ನಿಲ್ದಾಣ ಯುವಕರ ಆಕ್ರೋಶ, ಅಸಮಾಧಾನ, ಹತಾಷೆ, ಪ್ರತಿಭಟನೆಗೆ ಸಾಕ್ಷಿಯಾಗ್ಬಿಡ್ತು.  ಸಾವಿರಾರು ಯುವಕರು ರೈಲ್ವೆ ಇಲಾಖೆಯ ವಿರುದ್ಧ ಹಿಡಿಶಾಪ ಹಾಕ್ತಾ ಪ್ರತಿಭಟಿಸ್ತಿದ್ರೇ ಪೊಲೀಸರಿಗೇ ಪೀಕಲಾಟ. ಅಂದಹಾಗೇ, ಹೀಗೆ ಯುವಕರು ಬೆಳ್ ಬೆಳಗ್ಗೆ ಪ್ರತಿಭಟನೆಗಿಳಿಯೋದಕ್ಕೆ ಕಾರಣ ರೈಲ್ವೆ ಇಲಾಖೆಯ ನಿರ್ಲಕ್ಷ್ಯ. ಎಲ್ಲ ಅಂದ್ಕೊಂಡಂತಾಗಿದ್ರೇ ಈ ಎಲ್ಲ ಪರೀಕ್ಷಾರ್ಥಿಗಳು ಬೆಂಗಳೂರಿನಲ್ಲಿ ಡಿಎಆರ್ ಪರೀಕ್ಷೆ ಎದುರಿಸ್ಬೇಕಿತ್ತು. ಜಿಲ್ಲಾ ಸಶಸ್ತ್ರ ಮೀಸಲು ಪಡೆ ಪೇದೆ ಆಗೋ ಕನಸಿಟ್ಕೊಂಡು ಕೊಲ್ಲಾಪುರದಿಂದ ಬೆಂಗಳೂರಿಗೆ ಇವರು 16590 ನಂಬರ್ ನ ರಾಣಿ ಚೆನ್ನಮ್ಮ ರೈಲಿನಲ್ಲಿ ಹತ್ತಿದ್ರು. ಆದ್ರೇ, ನಿನ್ನೆ ರಾತ್ರ 8.30ಕ್ಕೆ ಧಾರವಾಡದ ಮುಗದ ಗ್ರಾಮದ ಬಳಿಯ ಕಂಬಾರಗಣವಿ ರೈಲು ನಿಲ್ದಾಣದ ಬಳಿ ಗೂಡ್ಸ್ ರೈಲು ಎಂಜಿನ್ ಕೈಕೊಟ್ಟಿತ್ತು. 15 ಬೋಗಿಗಳು ಸಾಲಾಗಿ ಹಿಂದೆ ನಿಂತಿದ್ವು. ರಾತ್ರಿ 10.30ಕ್ಕೆ ಅದೇ ಹಳಿ ಮೇಲೆ ರಾಣಿ ಚೆನ್ನಮ್ಮ ಟ್ರೇನ್ ಹೊರಡಬೇಕಿತ್ತು. ಆದ್ರೇ, 11.45 ಆಗಿದ್ರೂ ಹೊರಡಲೇ ಇಲ್ಲ. ಸ್ಟೇಷನ್ ಮಾಸ್ಟರ್ ಮಾತ್ರ ಪರ್ಯಾಯ ಎಂಜಿನ್ ಬರುತ್ತೆ ಅಂತ ಹೇಳಿದ್ದೇ ಬಂತು. ಆದ್ರೇ,  7 ಗಂಟೆಗೂ ಹೆಚ್ಚು ಕಾಲವಾದ್ರೂ ಇನ್ನೊಂದ್ ಎಂಜಿನ್ ಬರಲಿಲ್ಲ. ಎಂಜಿನ್ ಬಂದಾಗ ನಸುಕಿನ ಜಾವ 3.20. ಅದು ಹೊರಟು ನಿಂತಾಗ 3.30 ಗಂಟೆಯಾಗಿತ್ತು. ಇದಾದ್ಮೇಲೆ ಹುಬ್ಬಳ್ಳಿ ನಿಲ್ದಾಣಕ್ಕೆ ಟ್ರೇನ್ ಬಂದಿದ್ದು ಬೆಳಗ್ಗೆ 6 ಗಂಟೆಗೆ. ಹುಬ್ಬಳ್ಳಿಯಿಂದ ಬೆಂಗಳೂರಿಗೆ ಬೆಳಗ್ಗೆ 6 ಗಂಟೆಗೆ ಬಿಟ್ರು ಟ್ರೇನ್ ತಲುಪೋದು ಮಧ್ಯಾಹ್ನ 2 ಗಂಟೆಗೆ. ಆದ್ರೇ, ಪರೀಕ್ಷೆ ಶುರುವಾಗೋದು ಬೆಳಗ್ಗೆ 10ಕ್ಕೆ. ಪರೀಕ್ಷೆ ಬರೆಯೋ ಅವಕಾಶ ತಪ್ಪಿಸಿಕೊಂಡ ಸಿಟ್ಟಿನಲ್ಲಿ ಪರೀಕ್ಷಾರ್ಥಿಗಳು ಪ್ರತಿಭಟನೆಗಿಳಿದ್ರು. 
ಪ್ರಹ್ಲಾದ್, ಡಿಎಆರ್     ಪರೀಕ್ಷಾರ್ಥಿ ವಿಕಾಸ, ಡಿಎಆರ್ ಪರೀಕ್ಷಾರ್ಥಿ ಬೆಳಗಾವಿ, ಚಿಕ್ಕೋಡಿ ಸೇರಿದಂತೆ ಉತ್ತರಕರ್ನಾಟಕದ 3 ಸಾವಿರಕ್ಕೂ ಅಧಿಕ ಯುವಕರು ಪರೀಕ್ಷೆಯಿಂದ ಅವಕಾಶ ವಂಚಿತರಾದ್ರು. ಎಂಜಿನ್ ಕೆಟ್ಟು ನಿಂತಿರೋದು ಹುಬ್ಬಳ್ಳಿ ನೈರುತ್ಯ ರೈಲ್ವೆ ವಲಯದ ಕೇಂದ್ರ ಕಚೇರಿಯಿಂದ ಬರೀ 30 ಕಿ.ಮೀ ದೂರದಲ್ಲಿ ಪರ್ಯಾಯ ಎಂಜಿನ್ ಕಳುಹಿಸಿದ್ರೇ, ಪರೀಕ್ಷೆಗೆ ಅವಕಾಶ ಸಿಗ್ತಾಯಿತ್ತು. ಇಲಾಖೆ ಅಧಿಕಾರಿಗಳು ಮಾಹಿತಿ ನೀಡೋದ್ ಇರಲಿ, ಫೋನ್ ಕೂಡ ರಿಸೀವ್ ಮಾಡಲಿಲ್ಲ. ಇದು ಯುವಕರು ಕೆರಳೋದಕ್ಕೆ ಕಾರಣವಾಯಿತು.  ರೇಣುಕಾ ಸುಕುಮಾರ್, ಡಿಸಿಪಿ, ಕಾನೂನು ವ ಸುವ್ಯವಸ್ಥೆ
ಪ್ರತಿಭಟನಾ ಸ್ಥಳಕ್ಕೆ ಹುಬ್ಬಳ್ಳಿ-ಧಾರವಾಡ ಪೂರ್ವ ಕ್ಷೇತ್ರದ ಕಾಂಗ್ರೆಸ್ ಶಾಸಕ ಪ್ರಸಾದ್ ಅಬ್ಬಯ್ಯ ಧಾವಿಸಿದ್ರು. ಪ್ರತಿಭಟನಾನಿರತರ ಮನವೊಲಿಸ  ಯತ್ನಿಸಿದ್ರು. ಅಷ್ಟೇ ಅಲ್ಲ, ರೈಲ್ವೆ ಹಿರಿಯ ಅಧಿಕಾರಿಗಳ ಜತೆಗೂ ಮಾತನಾಡಿದ್ರು. ಮುಖ್ಯಮಂತ್ರಿ ಹೆಚ್ ಡಿ.ಕುಮಾರಸ್ವಾಮಿಗೆ ಪರೀಕ್ಷಾರ್ಥಿಗಳಿಗೆ ಆಗಿರೋ ಅನ್ಯಾಯದ ಕುರಿತಂತೆ ಮನವರಿಕೆ ಮಾಡಿದ್ರು. ತಕ್ಷಣವೇ ಸಿಎಂ ಇದಕ್ಕೆ ಸ್ಪಂದಿಸಿ, ರಾಜ್ಯ ಪೊಲೀಸ್ ಮಹಾನಿರ್ದೇಶಕರ ಜತೆಗೆ ಸಂಪರ್ಕಿಸಿ, ಅವಕಾಶ ವಂಚಿತ ಪರೀಕ್ಷಾರ್ಥಿಗಳಿಗೆ ಇನ್ನೊಂದ್ ಚಾನ್ಸ್ ನೀಡ್ಬೇಕು. ಆದಷ್ಟು ಬೇಗ ಪರೀಕ್ಷೆ ನಡೆಸ್ಬೇಕು ಅಂತ ಆದೇಶಿದ್ರು. ಅಷ್ಟೇ ಅಲ್ಲ, ಅವಕಾಶ ವಂಚಿತ ಪರೀಕ್ಷಾರ್ಥಿಗಳು ಹೆದರೋದು ಬೇಡ, ಇನ್ನೊಂದು ಸಾರಿ ಖಂಡಿತ ಪರೀಕ್ಷೆ ನಡೆಸ್ತೇವೆ ಅಂತ ಶಾಸಕ ಪ್ರಸಾದ ಅಬ್ಬಯ್ಯರಿಗೆ ಭರವಸೆ ಕೂಡ ನೀಡಿದ್ರು. ಇದಾದ್ಮೇಲೆ ಪ್ರತಿಭಟನಾನಿರತರ ಜತೆಗೆ ಶಾಸಕ ಪ್ರಸಾದ ಅಬ್ಬಯ್ಯ ಮಾತನಾಡಿ, ಸಿಎಂ ನೀಡಿರೋ ಭರವಸೆಯ ಬಗ್ಗೆ ಮನವರಿಕೆ ಮಾಡಿದ್ರು. ಇನ್ನೊಂದ್ ಅವಕಾಶ ಸಿಗುತ್ತೆ ಅಂದ ಕೂಡಲೇ 3 ಸಾವಿರಕ್ಕೂ ಅಧಿಕ ಪರೀಕ್ಷಾರ್ಥಿಗಳು ಪ್ರತಿಭಟನೆ ಹಿಂದಕ್ಕೆ ಪಡೆದ್ರು. 
ಪ್ರಸಾದ್ ಅಬ್ಬಯ್ಯ, ಕಾಂಗ್ರೆಸ್ ಶಾಸಕ, ಹು-ಧಾ ಪೂರ್ವ ಕ್ಷೇತ್ರ
ಇದರ ಜತೆಗೆ ರಾಜ್ಯ ಪೊಲೀಸ್ ನೇಮಕಾತಿ ಎಡಿಜಿಪಿ, ಗೃಹ ಸಚಿವರ ಜತೆಗೆ ಮುಖ್ಯಮಂತ್ರಿಗಳಿಗೂ ಇನ್ನೊಂದು ಸಾರಿ ಭೇಟಿಯಾಗಿ ಶಾಸಕ ಅಬ್ಬಯ್ಯ ಮಾತುಕತೆ ನಡೆಸಲಿದ್ದು, ಆದಷ್ಟು ಬೇಗ ಪರೀಕ್ಷಾ ದಿನಾಂಕ ಘೋಷಿಸಲು ಮನವಿ ಮಾಡಲಿದಾರೆ.  ಆದ್ರೇ, ನಿನ್ನೆಯ ಈ ಘಟನೆಯಲ್ಲಿ ರೈಲ್ವೆ ಇಲಾಖೆಯ ಹಿರಿಯ ಅಧಿಕಾರಿಗಳ ನಿರ್ಲಕ್ಷ್ಯತೆ ಎದ್ದು ಕಾಣಿಸ್ತಿದೆ.  ಯಾಕಂದ್ರೇ, ವೀಕೆಂಡ್ ಇರೋದ್ರಿಂದಾಗಿ ಯಾವೊಬ್ಬ ಹಿರಿಯ ಅಧಿಕಾರಿಗಳು ತಕ್ಷಣವೇ ಆಗಿರೋ ಅವ್ಯವಸ್ಥೆಯನ್ನ ಸರಿಪಡಿಸಿಲ್ಲ. ಹಾಗಾಗಿ ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಬೇಕು ಅಂತ ನೈರುತ್ಯ ರೈಲ್ವೆಯ ಡಿಆರ್ ಎಂಗೆ ಶಾಸಕ ಅಬ್ಬಯ್ಯ ಪತ್ರದ ಮುಖೇನ ಜತೆಗೆ ಮೌಖಿಕವಾಗಿ ಮನವಿ ಮಾಡಿದಾರೆ. ವೀಕೆಂಡ್ ನಲ್ಲಿ ಕಳೆದುಹೋಗಿದ್ದ ರೈಲ್ವೆ ಇಲಾಖೆ ಅಧಿಕಾರಿಗಳು, ಭವಿಷ್ಯ ಕಲ್ಪಿಸಿಕೊಳ್ಳ ಹೊರಟಿದ್ದ ಯುವಕರ ಬದುಕಿನ ಜತೆಗೆ ಚೆಲ್ಲಾಟವಾಡ್ಬಿಟ್ಟಿದಾರೆ. ಇನ್ನಾದ್ರೂ ರೈಲ್ವೆ ಇಲಾಖೆ ತಕ್ಷಣವೇ ಅವ್ಯವಸ್ಥೆ ಸರಿಪಡಿಸೋದಕ್ಕೆ ಸ್ಪಂದಿಸ್ಬೇಕಿದೆ, ಅಧಿಕಾರಿಗಳು ಇನ್ನೊಂದಿಷ್ಟು ಚುರುಕಾಗಿ ಕೆಲಸ ಮಾಡದಿದ್ರೇ ಇಡೀ ಇಲಾಖೆಗೆ ಕಪ್ಪು ಚುಕ್ಕೆ.
Share News

About Shaikh BIG TV NEWS, Hubballi

Check Also

ಗಸ್ತು ಪೊಲೀಸರ ಮೇಲೆ ದಾಳಿ: ಕಾನೂನಿಗೆ ಸವಾಲು ಹಾಕಿದ ದುಷ್ಕರ್ಮಿಗಳು!

ಪೊಲೀಸರೇ ಸುರಕ್ಷಿತ ಅಲ್ಲವಾ..? ಹುಬ್ಬಳ್ಳಿಯಲ್ಲಿ ಗೂಂಡಾಗಿರಿ ಮಿತಿ ಮೀರಿ! ಸ್ಮಶಾನದಲ್ಲೇ ದಾಳಿ: ಪೊಲೀಸರ ಮೇಲೆ ಚಾಕು ನಗರದಲ್ಲಿ ಭೀತಿ! ಕರ್ತವ್ಯದಲ್ಲಿದ್ದ …

Leave a Reply

Your email address will not be published. Required fields are marked *