Breaking News

ಹುಬ್ಬಳ್ಳಿಯ ಬೆಂಗೇರಿ ಗ್ರಾಮದೇವಿಯ ಭಂಡಾರ ಜಾತ್ರೆ

ಹುಬ್ಬಳ್ಳಿ : ವಾಣಿಜ್ಯ ನಗರ ಹುಬ್ಬಳ್ಳಿಯಲ್ಲಿ ಮೊನ್ನೆಯಷ್ಟೇ ರಂಗಪಂಚಮಿ ಮುಗಿದಿದ್ದರೂ ಇಲ್ಲೊಂದು ಕಡೆಯಲ್ಲಿ ಮತ್ತೊಂದು ಜಾತ್ರೆ ರಂಗಿನಿಂದ ಮೆರುಗು ಪಡೆದುಕೊಂಡು ಭಂಡಾರದ ಜಾತ್ರೆಯಾಗಿ ಪ್ರಸಿದ್ಧಿ ಪಡೆದಿದೆ.

ಹೌದು..ಹುಬ್ಬಳ್ಳಿಯ ಬೆಂಗೇರಿಯ ಗ್ರಾಮ ದೇವಿಯ ಜಾತ್ರೆಯಲ್ಲಿ ಭಕ್ತರು ಭಂಡಾರವನ್ನು ತೂರುವ ಮೂಲಕ ವಿಜೃಂಭಣೆಯಿಂದ ಭಂಡಾರದ ಜಾತ್ರೆ ಮಾಡಿದರು. ಸುಮಾರು 21 ವರ್ಷಗಳಿಗೊಮ್ಮೆ ನಡೆಯುವ ಈ ಜಾತ್ರೆ ಸಾಕಷ್ಟು ಸಾಂಪ್ರದಾಯಿಕ ಆಚರಣೆಯಿಂದ ಕೂಡಿರುತ್ತದೆ.

ಹಿರಿಯರು, ‌ಕಿರಿಯರು, ಮಹಿಳೆಯರು, ಪುರುಷರು ಎಂಬುವಂತ ಬೇಧವನ್ನು ಮರೆತು ಪರಸ್ಪರ ಭಂಡಾರ ತೂರುವ ಮೂಲಕ ಗ್ರಾಮದೇವತೆ ಜಾತ್ರೆ ಅದ್ದೂರಿಯಾಗಿ ಆಚರಿಸಲಾಯಿತು.

Share News

About admin

Check Also

ಉಸಿರುಗಟ್ಟಿಸಿ ಪತಿಯ ಹತ್ಯೆ; ಪತ್ನಿ ಸೇರಿ ಮೂವರ ಬಂಧನ

ಬೆಂಗಳೂರು: ಪಾರ್ಶ್ವವಾಯುವಿನಿಂದ ಹಾಸಿಗೆ ಹಿಡಿದಿದ್ದ ಪತಿಯನ್ನು ಉಸಿರುಗಟ್ಟಿಸಿ ಕೊಲೆ ಮಾಡಿ, ಹೃದಯಾಘಾತದಿಂದ ಮೃತಪಟ್ಟಿರುವುದಾಗಿ ಬಿಂಬಿಸಿದ ಆರೋಪದಡಿ ಪತ್ನಿ ಸೇರಿದಂತೆ ಮೂವರನ್ನು …

Leave a Reply

Your email address will not be published. Required fields are marked *