ನವದೆಹಲಿ: ನೂರಾರು ಜನರ ಸಾವಿಗೆ ಕಾರಣವಾದ ಭೀಕರ ಪ್ರವಾಹದ ಪರಿಸ್ಥಿತಿಯನ್ನು ಎದುರಿಸಲು ಪಶ್ಚಿಮ ಆಫ್ರಿಕಾದ ದೇಶವಾದ ನೈಜೀರಿಯಾಕ್ಕೆ ಭಾರತ 15 ಟನ್‌ಗಳಷ್ಟು ಮಾನವೀಯ ನೆರವನ್ನು ಕಳುಹಿಸಿಕೊಟ್ಟಿದೆ.
ಈ ಕುರಿತು ಸಾಮಾಜಿಕ ಮಾಧ್ಯಮದಲ್ಲಿ ಮಾಹಿತಿ ಹಂಚಿಕೊಂಡಿರುವ ವಿದೇಶಾಂಗ ವ್ಯವಹಾರಗಳ ಸಚಿವಾಲಯ, ನೈಜೀರಿಯಾದಲ್ಲಿ ಸಂಭವಿಸಿದ ಪ್ರವಾಹದಿಂದ ಸಂತ್ರಸ್ತರಾದವರಿಗೆ ಸಹಾಯ ನೀಡಲು ಭಾರತ 15 ಟನ್‌ಗಳ ನೆರವನ್ನು ರವಾನಿಸಿದೆ.
ಮುಂದಿನ ದಿನಗಳಲ್ಲಿ 60 ಟನ್‌ಗಳ ನೆರವನ್ನು ಕಳುಹಿಸಲಾಗುವುದು. ಇದರಲ್ಲಿ ಆಹಾರ, ಮಲಗುವ ಚಾಪೆಗಳು, ಹೊದಿಕೆಗಳು ಮತ್ತು ಇತರ ಪರಿಹಾರ ವಸ್ತುಗಳನ್ನು ಒಳಗೊಂಡಿದೆ ಎಂದು ತಿಳಿಸಿದೆ.
ದೇಶದ ಬಹುತೇಕ ಭಾಗಗಳಿಗೆ ಹಾನಿ ಉಂಟುಮಾಡಿರುವ ಈ ಪ್ರವಾಹದಿಂದಾಗಿ ಈ ವರ್ಷ ನೈಜೀರಿಯಾದಲ್ಲಿ ಕನಿಷ್ಠ 321 ಜನರು ಸಾವನ್ನಪ್ಪಿದ್ದು, ಸುಮಾರು 7 ಲಕ್ಷ 40 ಸಾವಿರಕ್ಕೂ ಹೆಚ್ಚು ಜನರನ್ನು ಸ್ಥಳಾಂತರಿಸಿದ ಕುರಿತು ವರದಿಯಾಗಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

