Breaking News

ಏಕಾಏಕಿ ಶಾಲೆಗೆ ಬೀಜ ಜಡಿದು ಪ್ರವಾಸಕ್ಕೆ ತೆರಳಿದ ಶಿಕ್ಷಕರು


ದಾವಣಗೆರೆ: ಜಿಲ್ಲೆಯ ಜಗಳೂರು ತಾಲೂಕಿನ ಬಿಳಿಚೋಡು ಗ್ರಾಮದಲ್ಲಿ ಶಾಲೆಗೆ ಬೀಜ ಜಡಿದು ಶಿಕ್ಷಕರು ಮೋಜು-ಮಸ್ತಿಗಾಗಿ ಪ್ರವಾಸಕ್ಕೆ ತೆರಳಿದ್ದಾರೆ.

ಕರ್ನಾಟಕ ಪಬ್ಲಿಕ್‌ ಶಾಲೆಯ ಶಿಕ್ಷಕರು ಶಿಕ್ಷಣ ಇಲಾಖೆಯ ಮೇಲಾಧಿಕಾರಿಗಳಿಗೆ ಮಾಹಿತಿ ನೀಡದೆ ನವೆಂಬರ್‌ 12 ರಂದು ಶನಿವಾರ ಮಕ್ಕಳಿಗೆ ರಜೆ ಘೋಷಿಸಿ ಆಂಡೇಲಿ ಪ್ರವಾಸಕ್ಕೆ ಹೋಗಿದ್ದಾರೆ. ಈ ಗಟನೆ ತಡವಾಗಿ ಬೆಳಕಿಗೆ ಬಂದಿದೆ.

ಶೈಕ್ಷಣಿಕ ಪ್ರವಾಸಕ್ಕೆ ಮಕ್ಕಳನ್ನು ಕರೆದುಕೊಂಡು ಹೋಗಬೇಕಿದ್ದ ಶಿಕ್ಷಕರು ಮೋಜು ಮಸ್ತಿಗಾಗಿ ತಾವೇ ಪ್ರವಾಸ ಕೈಗೊಂಡಿದ್ದಾರೆ. ಈ ಶಾಲೆಯಲ್ಲಿ ಎಲ್‌ ಕೆಜಿಯಿಂದ ಎಸ್‌ ಎಸ್‌ ಎಲ್‌ ಸಿ ವರೆಗೆ 290 ಮಕ್ಕಳು ಕಲಿಯುತ್ತಿದ್ದಾರೆ. ಎಲ್ಲಾ ಮಕ್ಕಳಿಗೆ ಒಂದು ದಿನ ರಜೆ ನೀಡಿ ಮುಖ್ಯ ಶಿಕ್ಷಕರ ನೇತೃತ್ವದಲ್ಲಿ ಎಲ್ಲಾ 14 ಜನ ಶಿಕ್ಷಕರು ಮತ್ತು ಶಿಕ್ಷಕಿಯರು ಪ್ರವಾಸಕ್ಕೆ ಹೋಗಿ ಬಂದಿದ್ದಾರೆ

Share News

About BigTv News

Check Also

ಪತ್ನಿಯ ಅಕ್ರಮ ಸಂಬಂಧ ಆರೋಪ: ಮನನೊಂದು ಆಟೋ ಚಾಲಕ ಆತ್ಮಹತ್ಯೆ

ಆನೇಕಲ್: ಪತ್ನಿಯ ಅಕ್ರಮ ಸಂಬಂಧದ ಆರೋಪ ಹಾಗೂ ಮಾನಸಿಕ ಕಿರುಕುಳದಿಂದ ಮನನೊಂದು ಆಟೋ ಚಾಲಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲೂಕಿನ …

Leave a Reply

Your email address will not be published. Required fields are marked *