ಹುಬ್ಬಳ್ಳಿ: ಕಳೆದ ಬಾರಿ ಬಿಜೆಪಿ ಸರ್ಕಾರ ರಚನೆ ಮಾಡೋವಾಗ ಶಾಸಕರನ್ನು ಕಳಸಿದ್ದೆ ಕಾಂಗ್ರೆಸ್, ಸಿದ್ದರಾಮಯ್ಯನವರೇ ಕೆಲ ಶಾಸಕರನ್ನು ಕಳಸಿದ್ರು, ಇವರಿಗೆ ಆಳೋಕೆ ನೈತಿಕತೆ ಇರಲಿಲ್ಲ, ಹೀಗಾಗಿ ನಾವು ಸರ್ಕಾರ ರಚನೆ ಮಾಡಿದ್ದೀ ಎಂದು ಹುಬ್ಬಳ್ಳಿಯಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೊಸ ಬಾಂಬ್ ಸಿಡಿಸಿದ್ದಾರೆ.
ಹುಬ್ಬಳ್ಳಿಯಲ್ಲಿ ಮಾತನಾಡಿದ ಜೋಶಿ ಅವರು, ಈ ಬಾರಿ ಅವರಿಗೆ ಬಹುಮತ ಇದೆ. ಈ ಬಾರಿ ನಾವು ವಿರೋಧ ಪಕ್ಷವಾಗಿ ಕೆಲಸ ಮಾಡೋದು ನಮ್ಮ ಪಕ್ಷದ ನಿರ್ಧಾರ ಎಂದು ತಿಳಿಸಿದ್ದಾರೆ.
ಇನ್ನು ಅಂದು ಕುಮಾರಸ್ವಾಮಿಯವರು ಮುಖ್ಯಮಂತ್ರಿಯಾಗಿ ಮುಂದುವರೆಯಬಾರದು ಅನ್ನೋ ಕಾರಣಕ್ಕೆ ಶಾಸಕರನ್ನ ಕಳಿಸಿದ್ದೇ ಕಾಂಗ್ರೆಸ್ ಎಂಬ ಮಾತಿನ ಮೂಲಕ ಕೇಂದ್ರ ಸಚಿವ ಜೋಶಿಯವರು ತಿವಿದಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news





