Breaking News

100 ಕೋಟಿ ಆಫರ್ ವಿಚಾರಕ್ಕೆ ಪ್ರತಿಕ್ರಿಯಿಸಿದ ಜೋಶಿ

ಹುಬ್ಬಳ್ಳಿ: 100 ಕೋಟಿ ಆಫರ್ ವಿಚಾರ, ರವಿ ಗಾಣಿಗ ದಾಖಲೆ ಇದ್ರೆ ಬಿಡುಗಡೆ ಮಾಡಲಿ, ಅಂತವರ ವಿರುದ್ಧ ಭಾರತ ಸರ್ಕಾರ ಕ್ರಮ ಕೈಗೊಳ್ಳುತ್ತೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದ್ದಾರೆ.

ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ವಿಷಯ ಡೈವರ್ಟ್ ಮಾಡಲು ಸುಮ್ಮನೆ ಏನೇನೋ ಮಾತಾಡ್ತಿದ್ದಾರೆ, ದಾಖಲೆ ಇದ್ರೆ ಬಿಡುಗಡೆ ಮಾಡಲಿ, ಯಾರ ಬೇಡ ಅಂದ್ರು, ಡೈವರ್ಟ್ ಮಾಡೋಕೆ ಏನೇನೋ ಆರೋಪ ಮಾಡ್ತಿದ್ದಾರೆ. ಸಿದ್ದರಾಮಯ್ಯ ಸಿಕ್ಕಿ ಹಾಕಿಕೊಂಡಿದ್ದಾರೆ. ಹೀಗಾಗಿ ಬಾಯಿಗೆ ಬಂದಂತೆ ಮಾತಾಡ್ತಿದ್ದಾರೆ.

ಮೊದಲು ಅವರ ವಿರುದ್ಧ ಕೋರ್ಟ್ ಆರ್ಡರ್ ಇದೆ. ಅದರ ಬಗ್ಗೆ ಯಾಕೆ ಮಾತಾಡಲ್ಲ,..?100 ಕೋಟಿ ಅಲ್ಲ,500 ಕೋಟಿ ಬಗ್ಗೆ ಮಾತಾಡಲಿ, ದಾಖಲೆ ಇದ್ರೆ ಕೊಡಿ ನಮ್ಮ ಸರ್ಕಾರ ಕ್ರಮ ಕೈಗೊಳ್ಳುತ್ತೆ, ತಮ್ಮ ಹುಳುಕು ಮುಚ್ಚಲು ಆರೋಪ ಮಾಡ್ತಿದ್ದಾರೆ. ಶಾಸಕ ರವಿ ಗಾಣಿಗ ಈ ಹಿಂದೆ ಕೂಡಾ ಮಾತಾಡಿದ್ರು. ಇದೀಗ ಮತ್ತೆ ಪ್ಲೇಟ್ ಉಲ್ಟಾ ಮಾಡಿದ್ದಾರೆ, ಇವೆಲ್ಲ ಅವರ ನಾಟಕ ಎಂದು ಜೋಶಿಯವರು ಖಾರವಾಗಿ ಕಿಡಿಕಾರಿದ್ದಾರೆ.

Share News

About Shaikh BigTv

Check Also

ಶಾಸಕ ಉಮೇಶ್ ಮೇಟಿ ಸೊಸೆ ವಿರುದ್ಧ ಅಕ್ರಮ ಆರೋಪ; ಎಂಡಿ ಓದುವಾಗ ಸರ್ಕಾರಿ ವೈದ್ಯೆಯಾಗಿ ವೇತನ ಪಡೆದರಾ ಅಂಕಿತಾ!

ಬಾಗಲಕೋಟೆ: ಖಾಸಗಿ ಕಾಲೇಜಿನಲ್ಲಿ MD ವ್ಯಾಸಂಗ ಮಾಡುತ್ತಲೇ ‘ನಮ್ಮ ಕ್ಲಿನಿಕ್’ನಲ್ಲಿ ವೈದ್ಯಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸದೆ ₹75 ಸಾವಿರ ಸರ್ಕಾರಿ ವೇತನ …

Leave a Reply

Your email address will not be published. Required fields are marked *