ಧಾರವಾಡ: ನವಲಗುಂದದ ಮುರಾರ್ಜಿ ದೇಸಾಯಿ ವಸತಿ ಶಾಲೆಗೆ ಶಾಸಕ ಎನ್.ಎಚ್.ಕೋನರಡ್ಡಿ ಇಂದು ದಿಢೀರ್ ಭೇಟಿ ನೀಡಿ ಅಲ್ಲಿ ಮಕ್ಕಳಿಗೆ ನೀಡಲಾಗುವ ಆಹಾರದ ಗುಣಮಟ್ಟವನ್ನು ಪರಿಶೀಲಿಸಿದರು.
ಶಾಲೆಯ ಸಭಾಭವನ, ಅಡುಗೆ ಮನೆ, ವಿವಿಧ ಧಾನ್ಯ ಸೇರಿದಂತೆ ಎಲ್ಲವನ್ನೂ ಪರಿಶೀಲಿಸಿದ ಶಾಸಕರು, ಮಕ್ಕಳೊಂದಿಗೆ ತಾವೂ ಊಟ ಮಾಡಿದರು. ಸ್ಟೋರ್ ರೂಮ್‌ನಲ್ಲಿದ್ದ ಕಡಲೆ ಧಾನ್ಯವನ್ನು ನೋಡಿದ ಶಾಸಕರು ಇವೇನು ಮನುಷ್ಯರು ತಿನ್ನೋ ಧಾನ್ಯಾನಾ? ಇಂತಹ ಧಾನ್ಯ ಮಕ್ಕಳಿಗೆ ಆಹಾರವಾಗಿ ನೀಡುವುದು ಎಷ್ಟು ಸರಿ ಎಂದು ಸಿಬ್ಬಂದಿಯನ್ನೂ ತೀವ್ರ ತರಾಟೆಗೆ ತೆಗೆದುಕೊಂಡರು. ಅಲ್ಲದೇ ಮೇಲಾಧಿಕಾರಿಗಳು ಈ ವಸತಿ ಶಾಲೆಗೆ ಪ್ರತಿವಾರಕ್ಕೊಮ್ಮೆ ಭೇಟಿ ನೀಡಿ ಆಹಾರ ಗುಣಮಟ್ಟವನ್ನು ಪರಿಶೀಲಿಸಬೇಕು ಎಂದು ತಾಕೀತು ಮಾಡಿದರು.
ಮಕ್ಕಳೊಂದಿಗೆ ಊಟ ಮಾಡಿದ ಶಾಸಕರು ಅಲ್ಲಿ ನೀಡಲಾಗುವ ಸಾಂಬಾರಿನ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಅಡುಗೆ ಸಿಬ್ಬಂದಿಯನ್ನು ಭೇಟಿ ಮಾಡಿ ಸಾಂಬಾರು ಚೆನ್ನಾಗಿ ಮಾಡೋದಕ್ಕೆ ಏನು ಸಮಸ್ಯೆ? ಚಟ್ಟಿ ಸರಿಯಾಗಿ ಮಾಡಿದ್ದೀರಿ. ಸಾಂಬಾರು ತಿನ್ನಲು ಯೋಗ್ಯವಾಗಿಲ್ಲ. ಇದನ್ನು ಸರಿಪಡಿಸಬೇಕು ಎಂದು ಸೂಚನೆ ನೀಡಿದರು.
bigtvnews | Hubli Dharwad News | Kannada News | Karnataka News Hubli News | News In Hubli | Local news

