ಹುಬ್ಬಳ್ಳಿ: ಬಸ್‌ನಲ್ಲಿ ಪ್ರಯಾಣಿಕರು ಬಿಟ್ಟು ಹೋಗಿದ್ದ ಲಕ್ಷಾಂತರ ಮೌಲ್ಯದ ಚಿನ್ನ-ಬೆಳ್ಳಿ ಒಡವೆ ಬ್ಯಾಗನ್ನು ವಾರಸುದಾರರಿಗೆ ಹಿಂದಿರುಗಿಸುವ ಮೂಲಕ, ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಚಾಲಕ ಹಾಗೂ ನಿರ್ವಾಹಕ
ರು ಪ್ರಾಮಾಣಿಕತೆ ಮೆರೆದಿದ್ದು ಪ್ರಶಂಸೆಗೆ ಪಾತ್ರರಾಗಿದ್ದಾರೆ.
ಗದಗ ಜಿಲ್ಲೆಯ ಶಿರಹಟ್ಟಿ ತಾಲ್ಲೂಕಿನ ಭಟ್ಟೂರು ನಿವಾಸಿ ಮಹಾದೇವಿ ಜಗದೀಶ ಯಳವತ್ತಿ ಎಂಬುವರು, ಮಂಗಳವಾರ ಮಧ್ಯಾಹ್ನ ತಮ್ಮ ಮಗುವಿನೊಂದಿಗೆ ಹುಬ್ಬಳ್ಳಿ ಗ್ರಾಮಾಂತರ 1ನೇ ಡಿಪೊ ಕೆ.ಎ 42 ಎಫ್ 590 ಬಸ್ಸಿನಲ್ಲಿ ಹುಬ್ಬಳ್ಳಿಯಿಂದ ಗುಂಜಳಕ್ಕೆ ಪ್ರಯಾಣ ಮಾಡಿದ್ದಾರೆ. ತಮ್ಮ ಊರಿನ ಬಸ್ ನಿಲ್ದಾಣದಲ್ಲಿ ಇಳಿಯುವಾಗ ಚಿನ್ನ, ಬೆಳ್ಳಿಯ ಒಡವೆಗಳು ಹಾಗೂ ನಗದು ಹಣವಿದ್ದ ಬ್ಯಾಗನ್ನು ಬಸ್‌ನಲ್ಲಿಯೇ ಮರೆತು ಹೋಗಿದ್ದಾರೆ. ಪ್ರಯಾಣಿಕರೆಲ್ಲ ಇಳಿದ ನಂತರ ಬಸ್ಸಿನ ನಿರ್ವಾಹಕ ಎಂ.ವಿ.ಹಿರೇಮಠ ಹಾಗೂ ಚಾಲಕರಾದ ಎಂ.ಎಚ್. ಪೀರಖಾನ್ ರವರು ಬ್ಯಾಗನ್ನು ಗಮನಿಸಿ ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆ. ಘಟಕದಲ್ಲಿ ಮೇಲಾಧಿಕಾರಿಗಳ ಸಮಕ್ಷಮದಲ್ಲಿ ಬ್ಯಾಗು ತೆಗೆದು ನೋಡಲಾಗಿ ಅದರಲ್ಲಿ ಚಿನ್ನ-ಬೆಳ್ಳಿ 220 ರೂ. ನಗದು ಹಣವಿರುವುದು ಗೊತ್ತಾಗಿದೆ. ಬ್ಯಾಗನಲ್ಲಿದ್ದ ಆಧಾರ್ ಕಾರ್ಡ್ ನಲ್ಲಿರುವ ದೂರವಾಣಿ ಸಂಖ್ಯೆಯ ಮೂಲಕ ವಾರಸುದಾರರನ್ನು ಸಂಪರ್ಕಿಸಿ ಮಾಹಿತಿ ಕಲೆ ಹಾಕಿದರು.
bigtvnews | Hubli Dharwad News | Kannada News | Karnataka News Hubli News | News In Hubli | Local news





