ಬಳ್ಳಾರಿ: ಸಂಡೂರು ಕ್ಷೇತ್ರದ ಉಪ ಚುನಾವಣೆ-2024ರ ಮತ ಎಣಿಕೆ ನಾಳೆ (ನವೆಂಬರ್ 23) ನಡೆಯಲಿದೆ. ಮತದಾನ ಸುಸೂತ್ರವಾಗಿ, ಶಾಂತಿಯುತವಾಗಿ ಮುಕ್ತಾಯಗೊಂಡಿದ್ದು, 6 ಅಭ್ಯರ್ಥಿಗಳ ಭವಿಷ್ಯ ಇವಿನಂನಲ್ಲಿ ಭದ್ರವಾಗಿದೆ. ಯಾರಿಗೆ ಗೆಲುವು ಎಂದು ಲೆಕ್ಕಾಚಾರಗಳು ನಡೆಯುತ್ತಿದ್ದು, ಬೆಟ್ಟಿಂಗ್ ಸಹ ನಡೆಯುತ್ತಿದೆ.
2023ರಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಂಡೂರು ಕ್ಷೇತ್ರದಲ್ಲಿ ಜಯಗಳಿಸಿದ್ದರು.
ಸಂಡೂರು ಉಪ ಚುನಾವಣೆಯ ಇವಿಎಂಗಳನ್ನು ಬಳ್ಳಾರಿ ನಗರದ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು ಕಟ್ಟಡದಲ್ಲಿ ಬಿಗಿ ಭದ್ರತೆಯಲ್ಲಿ ಇಡಲಾಗಿದೆ. ಕ್ಷೇತ್ರದ ವ್ಯಾಪ್ತಿಯ 253 ಮತಗಟ್ಟೆಗಳಲ್ಲಿ ನವೆಂಬರ್ 13ರ ಬುಧವಾರ ಮತದಾನ ನಡೆದಿದ್ದು, ಒಟ್ಟು ಶೇ 76.24 ರಷ್ಟು ಮತದಾನವಾಗಿತ್ತು.
ಬಳ್ಳಾರಿ ನಗರದ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಶನಿವಾರ ಮತ ಎಣಿಕೆ ನಡೆಯಲಿದೆ. ಬಳ್ಳಾರಿ ಎಸ್‌ಪಿ ಶೋಭಾ ರಾಣಿ ವಿ. ಜೆ. ಅವರು ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿಗೆ ಭೇಟಿ ನೀಡಿ ಮತದಾನದ ಸಿದ್ಧತೆಗಳ ಕುರಿತು ಪರಿಶೀಲನೆ ನಡೆಸಿದರು, ಅಧಿಕಾರಿಗಳಿಗೆ ಸೂಚನೆಗಳನ್ನು ನೀಡಿದರು.
bigtvnews | Hubli Dharwad News | Kannada News | Karnataka News Hubli News | News In Hubli | Local news





