ಹುಬ್ಬಳ್ಳಿ: ನಿವೇಶನ ಕೊಡಿಸುವುದಾಗಿ ಹೇಳಿ ವ್ಯಕ್ತಿಯೊಬ್ಬರಿಂದ 35 ಲಕ್ಷ ರೂಪಾಯಿ ಪಡೆದು ವಂಚಿಸಿರುವ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.
ಹುಬ್ಬಳ್ಳಿಯ ವಿಶ್ವೇಶ್ವರ ನಗರದ ನಿವಾಸಿ ಮೃತ್ಯುಂಜಯ ವಿನೋದ ಬರಿಮನಿ, ಭವಾನಿನಗರದ ಬೂದಿಹಾಳಮಠ ಎಂಬಾತ ನವನಗರದಲ್ಲಿ ಎರಡು, ತಡಸಿನಕೊಪ್ಪದಲ್ಲಿ ಒಂದು ನಿವೇಶನ ಕೊಡಿಸುವುದಾಗಿ ನಂಬಿಸಿದ್ದಾನೆ. ತನ್ನ ಪರಿಚಯಸ್ಥರ ಬ್ಯಾಂಕ್ ಖಾತೆಗಳಿಗೆ ವಿನೋದ ಹಾಗೂ ಅವರ ಪತ್ನಿ ಖಾತೆಯಿಂದ ಹಣ ಹಾಕಿಸಿಕೊಂಡಿದ್ದಾನೆ. ನಿವೇಶನ ಕೊಡಿಸದೆ, ಹಣವನ್ನೂ ಮರಳಿಸದೆ ವಂಚನೆ ಮಾಡಿದ್ದಾಗಿ ಅಶೋಕ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news





