ಹುಬ್ಬಳ್ಳಿ: ನಗರದ ಮರಾಠಗಲ್ಲಿಯ ಗಜಾನನ ಹೋಟೆಲ್ ಪಕ್ಕದ ಮನೆಯಲ್ಲಿ ಒಟ್ಟು 1.41 ಲಕ್ಷ ರೂಪಾಯಿ ಮೌಲ್ಯದ ಬೆಳ್ಳಿ ಮತ್ತು ಚಿನ್ನದ ಆಭರಣಗಳ ಕಳ್ಳತವಾಗಿದೆ.
ರಾಜೇಶ ಮಹಾದೇವರಾವ್ ಮಾನೆ ಅವರ ಮನೆಯಲ್ಲಿ ಯಾರು ಇಲ್ಲದ ವೇಳೆ ಎರಡು ಬೀಗ ಮುರಿದು ಒಳನುಗ್ಗಿದ ಕಳ್ಳರು, ಟಿಜೋರಿಯಲ್ಲಿದ್ದ 33.5 ಗ್ರಾಂ ತೂಕದ 1.34 ಲಕ್ಷ ಮೌಲ್ಯದ ಚಿನ್ನಾಭರಣ, 190 ಗ್ರಾಂ ತೂಕದ 7,600 ಮೌಲ್ಯದ ಬೆಳ್ಳಿ ಹಾಗೂ ಟಿವಿ ಕಳ್ಳತನವಾಗಿವೆ. ಈ ಕುರಿತು ಹುಬ್ಬಳ್ಳಿ ಶಹರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news





