Breaking News

ಅಂತರಾಷ್ಟ್ರೀಯ ಪ್ರಜಾ ಪ್ರಭುತ್ವ ದಿನಾಚರಣೆ; ಧಾರವಾಡ ಜಿಲ್ಲೆ ರಾಜ್ಯಕ್ಕೆ ಪ್ರಥಮ ಸ್ಥಾನ; ಮುಖ್ಯಮಂತ್ರಿಗಳಿಂದ ಪ್ರಶಸ್ತಿ ಸ್ವೀಕರಿಸಿದ ಜಿಲ್ಲಾಧಿಕಾರಿ ದಿವ್ಯ ಪ್ರಭು

ಧಾರವಾಡ: ಕರ್ನಾಟಕ ಸರ್ಕಾರವು ಕಳೆದ ಸೆಪ್ಟಂಬರ್ 15, 2024 ರಂದು ಅಂತರಾಷ್ಟ್ರೀಯ ಪ್ರಜಾ ಪ್ರಭುತ್ವ ದಿನಾಚರಣೆಯ ಅಂಗವಾಗಿ ಪ್ರಜಾಪ್ರಭುತ್ವ ಜಾಗೃತಿ ಮೂಡಿಸಲು ಬೀದರ್‍ದಿಂದ ಚಾಮರಾಜನಗರ ಜಿಲ್ಲೆಯವರೆಗೆ ಮಾನವ ಸರಪಳಿ ನಿರ್ಮಾಣ ಹಾಗೂ ವಿವಿಧ ಕಾರ್ಯಕ್ರಮಗಳಿಗೆ ಧಾರವಾಡ ಜಿಲ್ಲೆಯಿಂದ ಅತೀ ಹೆಚ್ಚು ಜನರು ಆನ್ ಲೈನ್ ಮೂಲಕ ತಮ್ಮ ಹೆಸರು ನೋಂದಣಿ ಮಾಡಿಕೊಂಡು ಭಾಗವಹಿಸಿದ್ದರಿಂದ ಮತ್ತು ವಿಭಿನ್ನ ಕಾರ್ಯ ಕ್ರಮಗಳ ಮೂಲಕ ಪ್ರಜಾಪ್ರಭುತ್ವ ದಿನಾಚರಣೆ ಯಶಸ್ವಿಗೊಳಿಸಿದ್ದರಿಂದ ಧಾರವಾಡ ಜಿಲ್ಲೆಗೆ ರಾಜ್ಯ ಸರ್ಕಾರವು ಪ್ರಥಮ ಸ್ಥಾನದ ಪ್ರಶಸ್ತಿ ಪ್ರಕಟಿಸಿತ್ತು.

ಇಂದು ಬೆಳಿಗ್ಗೆ ಬೆಂಗಳೂರಿನ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಆಯೋಜಿಸಿದ್ದ ರಾಜ್ಯಮಟ್ಟದ ಸಂವಿಧಾನ ದಿನಾಚರಣೆ ಕಾರ್ಯಕ್ರಮದಲ್ಲಿ ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯ ಅವರಿಂದ ಧಾರವಾಡ ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ಪ್ರಶಸ್ತಿ ಸ್ವೀಕರಿಸಿದರು.

ಮಾನವ ಸರಪಳಿ: ರಾಜ್ಯ ಸರಕಾರದ ನಿರ್ದೇಶನದಂತೆ ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ಧಾರವಾಡ ಜಿಲ್ಲೆಯಲ್ಲಿ ಸೆಪ್ಟೆಂಬರ 15, 2024 ರಂದು ಬೆಳಿಗ್ಗೆ 9:30 ರಿಂದ 10:30 ಗಂಟೆಯವರೆಗೆ ಜಿಲ್ಲೆಯ ತೇಗೂರ ಗ್ರಾಮ ಹದ್ದೆಯಿಂದ ಮಾವಿನಕೊಪ್ಪ ಗ್ರಾಮ ಹದ್ದೆಯವರೆಗೆ ಸುಮಾರು 51 ಕೀ.ಮಿ.ಉದ್ದದ ಮಾನವ ಸರಪಳಿ ರಚಿಸಲಾಗಿತ್ತು. 9:55 ರಿಂದ 10:05 ರ ವರೆಗೆ ಮಾನವ ಸರಪಳಿಯನ್ನು ದಾಖಲೆಗೆ ಪರಿಗಣಿಸಲಾಗಿತ್ತು.

ಮಾನವ ಸರಪಳಿಯಲ್ಲಿ ಒಟ್ಟು 3,57,555 ಜನ ಭಾಗವಹಿಸಿದ್ದರು. ವ್ಯಕ್ತಿಗತವಾಗಿ 47,965 ಮತ್ತು 1914 ಎನ್ ಜಿಓ ಹಾಗೂ ಸಂಘಟನೆಗಳು, ಈ ಸಂಘಟನೆಗಳ 3,07,717 ಜನರು, 129 ವಲಸಿಗರ ಕುಟುಂಗಳು ಮತ್ತು ಈ ಕುಟುಂಬಗಳ ಪೈಕಿ 1,873 ಜನರು ಪಾಲ್ಗೊಂಡಿದ್ದರು. ಒಟ್ಟಾರೆ ಜಿಲ್ಲೆಯಿಂದ ಸಾರ್ವಜನಿಕರು, ವಿದ್ಯಾರ್ಥಿಗಳು ಮತ್ತು ಸರಕಾರಿ ನೌಕರರು, ಕುಟುಂಬಗಳು, ಗ್ರಾಮಗಳ ಜನರು ಸೇರಿದಂತೆ ಸುಮಾರು 3,57,555 ಜನರು ಮಾನವ ಸರಪಳಿಯಲ್ಲಿ ಭಾಗವಹಿಸಿದ್ದರು.

ವಿಶೇಷ ಕಾರ್ಯಕ್ರಮ ಆಯೋಜನೆ: ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನದ ಅಂಗವಾಗಿ ಕೆಸಿಡಿ ಮೈದಾನದಲ್ಲಿ 200 ವಿದ್ಯಾರ್ಥಿಗಳು ಸೇರಿ, ಭಾರತ ರಾಷ್ಟ್ರ ಧ್ವಜಬಣ್ಣದ ಕ್ಯಾಪ್ ಧರಿಸಿ, ನಕ್ಷೆ ರೂಪಿಸಿದ್ದರು. 1 ಕೀ.ಮಿ.ಉದ್ದದ ಕೆಂಪು ಮತ್ತು ಹಳದಿ ಬಣ್ಣದ ಧ್ವಜ ಪ್ರದರ್ಶಿಸಿದ್ದರು.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ಕುಂಭಮೇಳ ಆಯೋಜಿಸಲಾಗಿತ್ತು. ವಿದ್ಯಾರ್ಥಿಗಳು ಸ್ವಾತಂತ್ರ್ಯ ಹೋರಾಟಗಾರರ ವೇಷಭೂಷಣ ಧರಿಸಿ, ಭಾಗವಹಿಸಿದ್ದರು. ಮಂಗಳಮುಖಿಯರು ಮಾನವ ಸರಪಳಿ ಕಾರ್ಯಕ್ರಮದಲ್ಲಿ ಫಾಲ್ಗೊಂಡು ಯಶಸ್ವಿಯಾಗಿ ಭಾಗವಹಿಸಿದ್ದರು.

ಈ ಎಲ್ಲ ವಿಶೇಷತೆ ಹಾಗೂ ಹೆಚ್ಚು ಜನ ಆನ್ ಲೈನ್ ನೋಂದಣಿ ಆಗಿರುವದನ್ನು ಗಮನಿಸಿರುವ ರಾಜ್ಯ ಸರಕಾರ ಧಾರವಾಡ ಜಿಲ್ಲೆಗೆ ಪ್ರಥಮ ಸ್ಥಾನದ ಬಹುಮಾನ ನೀಡಿ, ಗೌರವಿಸಿ ಪ್ರೋತ್ಸಾಹಿಸಿದೆ.

ಕಂದಾಯ ಇಲಾಖೆಯ ಸೇವೆಗಳ ಗುಣಮಟ್ಟದ ಅನುಷ್ಠಾನಕ್ಕಾಗಿ ರಾಜ್ಯಕ್ಕೆ ಉತ್ತಮ ಜಿಲ್ಲಾಧಿಕಾರಿ, ಗ್ರಾಮ ಆಡಳಿತ ಅಧಿಕಾರಿ ಮತ್ತು ಉತ್ತಮ ಸಮಾಲೋಚಕ ಪ್ರಶಸ್ತಿ ಗಳಿಸಿದ್ದ ಧಾರವಾಡ ಜಿಲ್ಲೆಗೆ ಈಗ ಪ್ರಜಾಪ್ರಭುತ್ವ ದಿನಾಚರಣೆಯಲ್ಲಿ ರಾಜ್ಯಕ್ಕೆ ಪ್ರಥಮ ಪ್ರಶಸ್ತಿ ಬಂದಿರುವುದು ಜಿಲ್ಲಾಡಳಿತ ಮತ್ತು ಜಿಲ್ಲೆಯ ನೌಕರರಿಗೆ ಹೆಮ್ಮೆ, ಪ್ರೋತ್ಸಾಹ ಹೆಚ್ಚಿಸಿದೆ.

Share News

About Shaikh BigTv

Check Also

ಶಿಶು ಅಭಿವೃದ್ಧಿ ಯೋಜನಾಧಿಕಾರಿಯಿಂದ ಲೈಂಗಿಕ ದೌರ್ಜನ್ಯ: ಮಹಿಳಾ ವಾರ್ಡನ್‌ ದೂರು

ಬೆಳಗಾವಿ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಶಿಶು ಅಭಿವೃದ್ಧಿ ಯೋಜನಾಧಿಕಾರಿಯೊಬ್ಬರು ತನಗೆ ಲೈಂಗಿಕ ಕಿರುಕುಳ ನೀಡಿದ್ದಾರೆ, ಜನಾಂಗೀಯ ನಿಂದಣೆ …

Leave a Reply

Your email address will not be published. Required fields are marked *