ಧಾರವಾಡ: ಪಂಚಮಸಾಲಿ ಮೀಸಲಾತಿ ಹೋರಾಟದಲ್ಲಿ ಎರಡು ಭಾಗವಾದ ವಿಚಾರಕ್ಕೆ ಸಂಬಂಧಿಸಿದಂತೆ ಧಾರವಾಡದಲ್ಲಿ ಶಾಸಕ ಅರವಿಂದ ಬೆಲ್ಲದ ಪ್ರತಿಕ್ರಿಯೆ ನೀಡಿದ್ದಾರೆ.
ಯಾವುದೇ ಕಾರಣಕ್ಕೂ ರ್ಯಾಲಿ ನಿಲ್ಲುವುದಿಲ್ಲ. ಟ್ರ್ಯಾಕ್ಟರ್ ರ್ಕ್ಯಾಲಿ ನಡೆದೇ ನಡೆಯುತ್ತದೆ ಎಂದು ಶಾಸಕ ವಿಜಯಾನಂದ ಕಾಶಪ್ಪನವರಿಗೆ ಅರವಿಂದ ಬೆಲ್ಲದ ಟಾಂಗ್ ಕೊಟ್ಟಿದ್ದಾರೆ.
ಕಾಶಪ್ಪನವರ್ ಅಧ್ಯಕ್ಷರಿದ್ದಾರೆ. ಅವರಿಗೆ ಆ ಸ್ಥಾನ ಸಿಕ್ಕಿದೆ ಎಂದರೆ ಅವರ ಜವಾಬ್ದಾರಿ ಇನ್ನೂ ಹೆಚ್ಚಾಗುತ್ತದೆ. ನಮ್ಮ ಪಕ್ಷ ಆಡಳಿತದಲ್ಲಿದ್ದಾಗ ಬಸನಗೌಡ ಪಾಟೀಲ, ನಾನು ಮತ್ತು ಸಿದ್ದು ಸವದಿ ಎಲ್ಲರೂ ಮೀಸಲಾತಿ ಸಂಬಂಧ ಸರ್ಕಾರದ ಮೇಲೆ ಒತ್ತಡ ತಂದಿದ್ದೆವು. ಬಿಜೆಪಿ ಸರ್ಕಾರ ಪಂಚಮಸಾಲಿಗೆ ಶೇ.6 ರಷ್ಟು ಮೀಸಲಾತಿ ನೀಡಿತ್ತು. ಸದ್ಯ ಕೈ ಸರ್ಕಾರ ಅದನ್ನು ಹೋಲ್ಡ್ ಮಾಡಿದೆ. ಇದರ ವಿರುದ್ಧ ಪಂಚಮಸಾಲಿಯ ಕೈ ಶಾಸಕರು, ಸಚಿವರು ಹೋರಾಟ ಮಾಡಬೇಕಿದೆ. ಸರ್ಕಾರದಲ್ಲಿದ್ದೇವೆ ಎಂದರೆ ಸರ್ಕಾರ ಮಾಡಿದ್ದು ಎಲ್ಲವೂ ನಿಜ ಅಲ್ಲ. ಅಧ್ಯಕ್ಷರಾಗಿರುವ ಕಾರಣಕ್ಕೆ ಕಾಶಪ್ಪನವರ ಎಲ್ಲದಕ್ಕೂ ಸುಮ್ಮನಿದ್ದಾರೆ ಎಂದರು.
bigtvnews | Hubli Dharwad News | Kannada News | Karnataka News Hubli News | News In Hubli | Local news





