ಹೆಸರು ಮಾಡಲು ಧರ್ಮ ದಂಗಲ್ ಗೆ ನಾಂದಿ ಹಾಡಿದ್ರಾ ಆರಕ್ಷಕರು!!!
ಮನುಜಮತ ಒಂದೇ ಪಥ ತತ್ವ ಸಿದ್ದಾಂತ ಮರೆತ…
ಜನಸ್ನೇಹಿ ಠಾಣೆ ಮಾಡಿ ಅಂದ್ರೆ ಹೋಮ ಹವನ ಮಾಡಿದ ಖಾಕಿಪಡೆ!!
ಸರ್ಕಾರಿ ಕಚೇರಿಗಳು ಒಂದು ಜಾತಿ, ಧರ್ಮಕ್ಕೆ ಸೀಮಿತವಲ್ಲ. ಸರ್ವಜನಾಂಗದ, ಸರ್ವಜನರಿಗೆ ಪೂರಕವಾಗಿರಬೇಕು. ಆದರೆ ಪೊಲೀಸ್ ಅಧಿಕಾರಿಗಳ ನಡೆಯು ಸಾರ್ವಜನಿಕ ವಲಯದಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.ಠಾಣಾ ವ್ಯಾಪ್ತಿಯಲ್ಲಿ ಅಪರಾಧ ಕೃತ್ಯ ಹೆಚ್ಚುತ್ತಿರುವುದಕ್ಕೆ ದೈವದ ಮೊರೆ ಹೋಗಿ, ನವಗ್ರಹ ಶಾಂತಿ ಹಾಗೂ ಉಮಾ ಮಾಹೇಶ್ವರ ಪೂಜೆ ನೆರವೇರಿಸಿದ್ದ… ಠಾಣೆಯ ಪೊಲೀಸ್ ಅಧಿಕಾರಿಗಳನ್ನು ಎಡಿಜಿಪಿ ಹಿತೇಂದ್ರ ಆರ್. ಅವರು ತೀವ್ರ ತರಾಟೆಗೆ ತೆಗೆದುಕೊಂಡರು.
ಚಳಿಗಾಲದ ಅಧಿವೇಶನದ ಬಂದೋಬಸ್ತ್ ನಿಯೋಜನೆ ಬಗ್ಗೆ ಶುಕ್ರವಾರ ಪರಿಶೀಲನೆ ನಡೆಯಿಸಿದ ಆರ್.ಹಿತೇಂದ್ರ ಅವರು ಬಳಿಕ ಅಧಿಕಾರಿಗಳ ಸಭೆ ನಡೆಸಿದರು. ಇದೇ ಸಂದರ್ಭದಲ್ಲಿ ಠಾಣಾಧಿಕಾರಿಗಳ ನಡೆ ಪ್ರಶ್ನಿಸಿದರಲ್ಲದೇ, ಕಾನೂನು ಸುವ್ಯವಸ್ಥೆ ಕಾಪಾಡಲು ಅಗತ್ಯವಾಗಿ ಕಟ್ಟುನಿಟ್ಟಿನ ಕ್ರಮ ಜರುಗಿಸುವಂತೆ ಎಚ್ಚರಿಕೆ ನೀಡಿದರು. ಈ ಹಿಂದೆ ಸಿಎಂ ಸಿದ್ಧರಾಮಯ್ಯನವರು ಕೂಡ ಎಚ್ಚರಿಕೆ ನೀಡಿದ್ದರು.ಕಳೆದ ಹಲವು ದಿನಗಳಿಂದ.. ಠಾಣಾ ವ್ಯಾಪ್ತಿಯಲ್ಲಿ ಹೆಚ್ಚಾಗಿ ಅಪರಾಧಕೃತ್ಯಗಳ ನಡೆಯುತ್ತಿರುವುದರಿಂದ ಅವರು ಸೇರಿದಂತೆ ಠಾಣೆಯ ಸಿಬ್ಬಂದಿಗಳೆಲ್ಲರೂ ಸೇರಿ ಗುರುವಾರ ನವಗ್ರಹ ಶಾಂತಿ ಹಾಗೂ ಉಮಾ ಮಾಹೇಶ್ವರ ಪೂಜಾ ನೆರವೇರಿಸಿದ್ದರು. ಈ ದೃಶ್ಯಾವಳಿಗಳು ವೈರಲ್ ಆಗುತ್ತಲ್ಲದೇ, ಪೊಲೀಸರ ನಡೆ ಬಗ್ಗೆ ಮಿಶ್ರಪ್ರತಿಕ್ರಿಯೆ ವ್ಯಕ್ತವಾಗಿತ್ತು.
bigtvnews | Hubli Dharwad News | Kannada News | Karnataka News Hubli News | News In Hubli | Local news

