ನವಲಗುಂದ: ಪಟ್ಟಣದ ಗವಿಮಠ ದಾಸೋಹ ಭವನದಲ್ಲಿ ಪಂಚಮಸಾಲಿ ಮೀಸಲಾತಿ ಹೋರಾಟ ಪೂರ್ವಭಾವಿ ಸಭೆ ಕೂಡಲಸಂಗಮದ ಜಯಬಸವ ಮೃತ್ಯುಂಜಯ ಮಹಾಸ್ವಾಮಿಗಳು ನೇತೃತ್ವದಲ್ಲಿ ಜರುಗಿತು.
ಈ ವೇಳೆ ಶ್ರೀಗಳು ಮಾತನಾಡಿ, ಬೆಳಗಾವಿಯಲ್ಲಿ ನಡೆಯುವ ಚಳಿಗಾಲದ ಅಧಿವೇಶನದ ವೇಳೆ ಸರ್ಕಾರದ ಗಮನ ಚಳಿಯಲು ಪ್ರತಿಗ್ರಾಮ, ಪಟ್ಟಣದ ರೈತರು ತಮ್ಮ ಟ್ರಾಕ್ಟರ್ ಗಳ ಮೂಲಕ ಸುವರ್ಣಸೌದಕ್ಕೆ ಮುತ್ತಿಗೆ ಹಾಕಲು ರಾಜ್ಯದ ಮೂಲೆಗಳಿಂದ ಆಗಮಿಸುತ್ತಿದ್ದಾರೆ ಮುತ್ತಿಗೆ ಹಾಕಲು ಬರುವ ಜನರು ತಮ್ಮ ರೊಟ್ಟಿ ಬುತ್ತಿಯನ್ನು ಕಟ್ಟಿಕೊಂಡು ಬರುವಂತೆ ಮನವಿ ಮಾಡಿದರು.
ನಮ್ಮ ಹೋರಾಟ ಯಾವುದೇ ಸಮಾಜದ ವಿರುದ್ದ ಅಲ್ಲ ಪಂಚಮಸಾಲಿ ಸಮುದಾಯದ ಮಕ್ಕಳ ಮುಂದಿನ ಶೈಕ್ಷಣಿಕ ಭವಿಷ್ಯಕ್ಕಾಗಿ ವಕೀಲರು ಕೂಡ ಹೋರಾಟಕ್ಕೆ ಧುಮುಕಿರುವುದು ಸ್ವಾಗತ ಸರ್ಕಾರ ಟ್ರ್ಯಾಕ್ಟರ್ ಗಳನ್ನು ವಾಹನಗಳನ್ನು ತಡೆದು ನಮ್ಮ ಹೋರಾಟವನ್ನು ಹತ್ತಿಕ್ಕುವ ಹುನ್ನಾರ ನಡೆಸಿದೆ ಇದಕ್ಕೆ ಯಾರು ಹೆದರಬಾರದು ಪೊಲೀಸರು ಪ್ರಕರಣವನ್ನು ದಾಖಲಿಸಿದರೆ ನಮ್ಮ ಸಮಾಜದ ವಕೀಲರು ಮುಕ್ತವಾಗಿ ಟ್ರ್ಯಾಕ್ಟರ್ ಗಳನ್ನು ಬಿಡಿಸಿಕೊಂಡು ಬರುವ ಜವಾಬ್ದಾರಿಯನ್ನು ಹೊತ್ತಿಕೊಂಡಿರುತ್ತಾರೆ ಕಾರಣ ಯಾರು ಹೆದರುವ ಅವಶ್ಯಕತೆ ಇಲ್ಲ ಎಂದು ಹೇಳಿದರು.
bigtvnews | Hubli Dharwad News | Kannada News | Karnataka News Hubli News | News In Hubli | Local news





