Breaking News

ಕ್ಷೌರಿಕರ ಮೇಲೆ ಬಿಜೆಪಿ ಮುಖಂಡನಿಂದ ದರ್ಪ

ಹುಬ್ಬಳ್ಳಿ: ತನ್ನ ಮಗನ ಹೇರ್ ಕಟಿಂಗ್ ವಿಚಾರವಾಗಿ ಬಿಜೆಪಿ‌ ಮುಖಂಡನಿಂದ ಮೂರು ಜನ‌ ಕ್ಷೌರಿಕರ ಮೇಲೆ ಹಲ್ಲೆ ನಡೆಸಿದ ಘಟನೆ ಹುಬ್ಬಳ್ಳಿಯ ನವನಗರದಲ್ಲಿರುವ ಹೇರ್ ಕಟಿಂಗ್ ಸಲೂನ್ ನಲ್ಲಿ ನಡೆದಿದೆ.

ತನ್ನ ಮಗನ ಹೇರ್ ಕಟಿಂಗ್ ವಿಚಾರವಾಗಿ ಸಲೂನ್ ನಲ್ಲಿದ್ದ ಕ್ಷೌರಿಕರಿಗೆ ಮನಬಂದಂತೆ ಥಳಿಸಿದ ಬಿಜೆಪಿ ಮುಖಂಡ ವಿಜಯಕುಮಾರ ಅಪ್ಪಾಜಿ ಹುಬ್ಬಳ್ಳಿಯ ನವನಗರದ ನಿವಾಸಿ. ಹಲವು ಬಿಜೆಪಿ ಮುಖಂಡರ‌ ಜೊತೆ ಗುರುತಿಸಿಕೊಂಡಿರುವ ವಿಜಯ ಕುಮಾರ ಅಪ್ಪಾಜಿ ನವನಗರದಲ್ಲಿರುವ ಲೊರೇಲ್ ಸಲೂನ್ ನಲ್ಲಿರುವ ಸಿಬ್ಬಂಧಿ ಮೇಲೆ ದರ್ಪ ನಡೆಸಿದ್ದು, ಸಲೂನ್ ಗೆ ನುಗ್ಗಿ‌ ಏಕಾಏಕಿ ಮೂರು ಜನರಿಗೆ ರಾಡ್ ನಿಂದ ಹಿಗ್ಗಾಮುಗ್ಗಾ ಥಳಿಸಿ ದರ್ಪ ಮೆರೆದ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ಪೊಲೀಸ್ ಆಯುಕ್ತರ ಕಚೇರಿಗೆ ಕೂಗಳತೆಯ ದೂರದಲ್ಲಿರುವ ಸಲೂನ್ ಶಾಪ್ ಗೆ ನುಗ್ಗಿ ಹಲ್ಲೆ ನಡೆಸಿದ್ದಾರೆ. ನವನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಘಟನೆ ನಡೆದಿದೆ.

Share News

About Shaikh BigTv

Check Also

ಸಿಸಿಬಿ ಪೊಲೀಸರ ಕಾರ್ಯಾಚರಣೆ: ಬೆಂಗಳೂರಿನಲ್ಲಿ 30 ಲಕ್ಷ ಮೌಲ್ಯದ ನಕಲಿ ಸಿಗರೇಟ್ ಜಪ್ತಿ

ಬೆಂಗಳೂರು: ಸಿಸಿಬಿ ಹಾಗೂ ಉಪ್ಪಾರಪೇಟೆ ಪೊಲೀಸರು ಪ್ರತ್ಯೇಕ ಕಾರ್ಯಾಚರಣೆ ನಡೆಸಿ ಒಟ್ಟು ₹30 ಲಕ್ಷ ಮೌಲ್ಯದ ನಕಲಿ ಸಿಗರೇಟ್‌ಗಳನ್ನು ಜಪ್ತಿ …

Leave a Reply

Your email address will not be published. Required fields are marked *