ಕುಂದಗೋಳ: ಕುಂದಗೋಳ ಪಟ್ಟಣದ ಅಂಬೇಡ್ಕರ್ ನಗರದಲ್ಲಿ ಎರಡು ಕುಟುಂಬಗಳ ಮಧ್ಯೆ ನಡೆದ ಜಗಳ ಇದೀಗ ಪೊಲೀಸ್ ಠಾಣೆ ಮೆಟ್ಟಿಲೇರಿದೆ.
ಕಳೆದ ಡಿಸೆಂಬರ್ 7ರಂದು ಕುಂದಗೋಳ ಪಟ್ಟಣದ ಬಸವರಾಜ ದೊಡ್ಡಮನಿ ಮತ್ತು ಮೀನಾಕ್ಷಿ, ನಿಂಗಪ್ಪ ಎಂಬುವರ ಮಧ್ಯೆ ಜಗಳ ನಡೆದಿತ್ತು. ಈ ವೇಳೆ ನನ್ನ ಮೇಲೆ 14 ಜನ ಆರೋಪಿಗಳು ಹಲ್ಲೆ ಮಾಡಿದ್ದಲ್ಲದೆ ಅವಾಚ್ಯ ಶಬ್ದಗಳಿಂದ ನಿಂದಿಸಿ, ಜೀವ ಬೆದರಿಕೆ ಹಾಕಿದ್ದಾರೆ ಎಂದು ಬಸವರಾಜ ದೊಡ್ಡಮನಿ ಆರೋಪಿಸಿದ್ದಾರೆ. ಜೊತೆಗೆ 14 ಜನ ಆರೋಪಿಗಳ ಹೆಸರನ್ನು ಉಲ್ಲೇಖಿಸಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಈ ಸಂಬಂಧ ಕುಂದಗೋಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ದೂರಿನ ಅನ್ವಯ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news





