Breaking News

ಲೋಕೋಪಯೋಗಿ ಇಲಾಖೆಗೆ ₹6000 ಕೋಟಿ ಅನುದಾನ: ಸಿಎಂ ಸಿದ್ದರಾಮಯ್ಯ

ಬೆಳಗಾವಿ: ಲೋಕೋಪಯೋಗಿ ಇಲಾಖೆಯ ಅಪೆಂಡಿಕ್ಸ್‌(ಇ) ಅಡಿ ₹4,000 ಕೋಟಿ ಮತ್ತು ಗ್ರಾಮಾಂತರ ರಸ್ತೆಗಳ ಅಭಿವೃದ್ಧಿಗೆ ₹2,000 ಕೋಟಿ ಅನುದಾನ ನೀಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಧಾನಸಭೆಯಲ್ಲಿ ಘೋಷಿಸಿದರು.
ಗಮನ ಸೆಳೆಯುವ ಸೂಚನೆಯಡಿ ಬಿಜೆಪಿಯ ವಿ.ಸುನಿಲ್ ಕುಮಾರ್ ಮತ್ತು ಇತರ ಶಾಸಕರ ಚರ್ಚೆಗೆ ಉತ್ತರ ನೀಡಿದ ಅವರು, ‘ಎಲ್ಲ ಪಕ್ಷಗಳ ಶಾಸಕರಿಗೂ ಅನುದಾನ ನೀಡುತ್ತೇವೆ’ ಎಂದು ಭರವಸೆ ನೀಡಿದರು.
ಬೆಂಗಳೂರು ನಗರಕ್ಕೂ ವಿಶೇಷ ಅನುದಾನ ನೀಡುತ್ತೇವೆ’ ಎಂದು ಹೇಳಿದ ಅವರು ಎಷ್ಟು ಮೊತ್ತ ನೀಡಲಾಗುತ್ತದೆ ಎಂಬುದನ್ನು ಹೇಳಲಿಲ್ಲ.
ಅನುದಾನ ನೀಡದೇ ಅಭಿವೃದ್ಧಿ ಕುಂಠಿತವಾಗಿದೆ ಎಂಬುದು ಸತ್ಯಕ್ಕೆ ದೂರವಾಗಿದೆ. ಬಿ.ಎಸ್‌.ಯಡಿಯೂರಪ್ಪ ಮತ್ತು ಬಸವರಾಜ ಬೊಮ್ಮಾಯಿ ಅವರ ಅವಧಿಯಲ್ಲಿ ರಾಜ್ಯದ ಆರ್ಥಿಕತೆಯನ್ನು ಸಂಪೂರ್ಣ ಹಾಳುಗೆಡವಿದರು. ಅರಾಜಕತೆ ಸೃಷ್ಟಿ ಮಾಡಿದರು ಎಂದು ಆರೋಪಿಸಿದರು.
ಬಜೆಟ್‌ ನಿಗದಿ ಮಾಡದೇ ₹2.9 ಲಕ್ಷ ಕೋಟಿ ಕಾಮಗಾರಿಗಳು ಮತ್ತು ಕಾರ್ಯಾದೇಶವನ್ನು ಕೊಟ್ಟು ಹೋಗಿದ್ದರು. ಅಲ್ಲದೇ, ಗುತ್ತಿಗೆದಾರರಿಗೆ ₹29,006 ಕೋಟಿ ಬಿಲ್‌ ಪಾವತಿ ಮಾಡದೇ ಹೋಗಿದ್ದರು. ನಮ್ಮ ಸರ್ಕಾರ ಬಂದ ನಂತರ ₹18,018 ಕೋಟಿ ಪಾವತಿ ಮಾಡಿದ್ದೇವೆ ಎಂದು ಸಿದ್ದರಾಮಯ್ಯ ಹೇಳಿದರು.

Share News

About BigTv News

Check Also

68 ಎಕರೆ ಜಮೀನಿಗೆ ನಕಲಿ ದಾಖಲೆ ಸೃಷ್ಟಿಸಿದ ಆರೋಪ, ಕೆಎಎಸ್ ಅಧಿಕಾರಿ ವಿರುದ್ಧ ಎಫ್‌ಐಆರ್!

ಬೆಂಗಳೂರು ಗ್ರಾಮಾಂತರ: ದೇವನಹಳ್ಳಿ ತಾಲೂಕಿನಲ್ಲಿ ಕೋಟ್ಯಂತರ ರೂಪಾಯಿ ಮೌಲ್ಯದ ಜಮೀನಿಗೆ ನಕಲಿ ದಾಖಲೆ ಸೃಷ್ಟಿಸಿ, ಅಕ್ರಮವಾಗಿ ಆರ್‌ಟಿಸಿ ಖಾತೆ ಬದಲಾವಣೆ …

Leave a Reply

Your email address will not be published. Required fields are marked *