Breaking News

ರಾಮಮಂದಿರ ಕಟ್ಟುವುದರಿಂದ ಹಿಂದೂ ನಾಯಕನಾಗುವುದಿಲ್ಲ: ಮೋಹನ್ ಭಾಗವತ್

ಪುಣೆ: ರಾಮಮಂದಿರ ಕಟ್ಟುವುದರಿಂದ ಹಿಂದೂ ನಾಯಕನಾಗುವುದಿಲ್ಲ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್ ಎಸ್) ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದಾರೆ.
ಭಾಗವತ್ ಅವರು ಯಾರದೇ ಹೆಸರೆತ್ತದೇ ಈ ಮಾತು ಆಡಿದ್ದಾರೆ. ಪುಣೆಯಲ್ಲಿ ಉಪನ್ಯಾಸ ಮಾಲಿಕೆಯೊಂದರಲ್ಲಿ ವಿಶ್ವಗುರು ಭಾರತ ಕುರಿತು ಭಾಷಣ ಮಾಡಿದ ಭಾಗವತ್, ರಾಮಮಂದಿರ ಹಿಂದೂಗಳ ನಂಬಿಕೆಯ ವಿಷಯವಾಗಿದೆ.
ರಾಮ ಮಂದಿರ ನಿರ್ಮಾಣವಾಗಬೇಕು ಎಂದು ಹಿಂದೂಗಳು ನಂಬಿದರು. ಆದರೆ ಈಗ ನಿರ್ಮಾಣ ಮಾಡುವುದರಿಂದ ಯಾವುದೇ ವ್ಯಕ್ತಿಯು ಹಿಂದೂ ನಾಯಕನಾಗುವುದಿಲ್ಲ ಎಂದರು.
ಇದಲ್ಲದೆ, ರಾಮಮಂದಿರ ನಿರ್ಮಾಣದ ಬಳಿಕ, ಇಂತಹ ಇನ್ನಷ್ಟು ಸಮಸ್ಯೆಗಳನ್ನು ಹೊರತಂದು ತಾವು ಹಿಂದೂ ನಾಯಕರಾಗಬಹುದು ಎಂದು ಹಲವರು ಭಾವಿಸಿದ್ದಾರೆ. ಇದಕ್ಕಾಗಿ ಪ್ರತಿ ದಿನ ಒಂದೊಂದು ಸಮಸ್ಯೆಯನ್ನು ಹುಡುಕಿ ತೆಗೆಯುತ್ತಿದ್ದಾರೆ. ಇದು ಸ್ವೀಕಾರಾರ್ಹವಲ್ಲ ಎಂದೂ ಹೇಳಿದರು.
ನಾವು (ಭಾರತ) ವಿಶ್ವಗುರು (ಜಾಗತಿಕ ನಾಯಕ) ಆಗಬೇಕೆಂದು ಮಾತನಾಡುತ್ತೇವೆ. ಆದರೆ ‘ಮಹಾಶಕ್ತಿ’ (ಸೂಪರ್ ಪರ್ವ) ಆಗಬೇಕು ಎಂದು ಮಾತನಾಡುವುದಿಲ್ಲ. ಏಕೆಂದರೆ ಸೂಪರ್‌ ಪವರ್‌ದ ನಂತರ ಜನರು ಹೇಗೆ ವರ್ತಿಸುತ್ತಾರೆ ಎಂಬುದನ್ನು ನಾವು ನೋಡಿದ್ದೇವೆ. ಪರಮಾಧಿಕಾರಕ್ಕಾಗಿ ಸ್ವಾರ್ಥ ಸಾಧನೆ ಮಾಡುವುದು ನಮ್ಮ ಮಾರ್ಗವಲ್ಲ ಎಂದು ಅವರು ನುಡಿದರು.

Share News

About bigtvnews22

Check Also

ಶಿಶು ಅಭಿವೃದ್ಧಿ ಯೋಜನಾಧಿಕಾರಿಯಿಂದ ಲೈಂಗಿಕ ದೌರ್ಜನ್ಯ: ಮಹಿಳಾ ವಾರ್ಡನ್‌ ದೂರು

ಬೆಳಗಾವಿ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಶಿಶು ಅಭಿವೃದ್ಧಿ ಯೋಜನಾಧಿಕಾರಿಯೊಬ್ಬರು ತನಗೆ ಲೈಂಗಿಕ ಕಿರುಕುಳ ನೀಡಿದ್ದಾರೆ, ಜನಾಂಗೀಯ ನಿಂದಣೆ …

Leave a Reply

Your email address will not be published. Required fields are marked *