Breaking News

ಅಪ್ರತಿಮ ಕಲಾವಿದನ ಕುಂಚದಲ್ಲಿ ಅರಳಿದ ಅದ್ಭುತ ಕಲಾಕೃತಿಗಳು..

ಮಂಡ್ಯ: ಜಿಲ್ಲೆಯ ಕಿಕ್ಕೇರಿ ಗ್ರಾಮದವರಾದ ಪರಮೇಶ್ ರವರು ಸಮಾಜದ ಅಪ್ರತಿಮ ಕಲಾವಿದರು. ಇವರು ಕೆ.ಆರ್.ಪೇಟೆ ತಾಲ್ಲೂಕಿನ ವಳಗೆರೆಮೆಣಸದಲ್ಲಿ ಕಲಾ ಶಿಕ್ಷಕರಾಗಿ ಸರ್ಕಾರಿ ಫ್ರೌಢಶಾಲೆಯಲ್ಲಿ ಸೇವೆ ಸಲ್ಲಿಸುತ್ತಾ ಕಲಾ ಸೇವೆಯನ್ನು ಸಲ್ಲಿಸುತ್ತಾ ಇದ್ದಾರೆ.ಇವರ ಅದ್ಬುತ ಕಲಾ ಕುಂಚದಿಂದ ನಾಡಿನ ಉದ್ದಗಲಕ್ಕೂ ಇವರ ಕೆತ್ತನೆಯ ಮೂಲಕ ನಿರ್ಜೀವ ಕಲ್ಲುಗಳಿಗೆ ಜೀವಕಳೆ ತುಂಬಿದ್ದಾರೆ. ಇಂತಹ ಅದ್ಬುತ ಕಲೆಗಾರನನ್ನು ನಮ್ಮ ಜನಾಂಗದವರು ಕುರುಹಿನಶೆಟ್ಟಿ ಸಮಾಜದಂತಹ ಸಣ್ಣ ಸಮುದಾಯದಲ್ಲಿ ಹುಟ್ಟಿರುವ ಕಾರಣಕ್ಕೋ ಏನೋ ಇದುವರೆವಿಗೆ ಬೆಳಕಿಗೆ ಬಾರದೇ ಎಲೆಮರೆ ಕಾಯಿಯಂತೆ ಬದುಕು ಸಾಗಿಸಿಸುತ್ತಾರೆ. ಇವರ ಕಲಾಕುಸರಿಯಿಂದಾಗಿ ಮೈಸೂರು ರಾಜ ಮಹಾರಾಜರು, ರಾಜಭವನದಲ್ಲಿ ವಿವಿಧ ಪ್ರತಿಮೆಗಳನ್ನು ಸೃಷ್ಟಿಸಿದ್ದಾರೆ. ವಿವಿಧ ದೇವರುಗಳ ಪ್ರತಿಮೆಗಳು, ರಾಷ್ಟ್ರ ನಾಯಕರು, ಸಮಾಜ ಸುಧಾರಕರು, ಹೋರಾಟಗಾರರ ಚಿತ್ರಗಳನ್ನು ಕೆತ್ತನೆಯ ಮೂಲಕ ಇವರು ಕಲಾಸಿರಿವಂತಿಕೆಯನ್ನು ಮೇಲೈಸುವಂತೆ ಮಾಡಿದ್ದಾರೆ.ಇಂತಹ ಕಲಾವಿದರಿಗೆ ತಾಲ್ಲೂಕು ಆಡಳಿತ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಸಂಘ ಸಂಸ್ಥೆಗಳಷ್ಟೇ ಗೌರವಿಸಿದೆ. ಮಂಡ್ಯ ಜಿಲ್ಲಾಡಳಿತಕ್ಕೆ ಜಿಲ್ಲಾ ಪ್ರಶಸ್ತಿಗೆ ಕೆ.ಆರ್.ಪೇಟೆ ಆಡಳಿತದಿಂದ ಶಿಫಾರಸ್ಸುಗೊಂಡರೂ ಸಹ ಜಿಲ್ಲಾ ಮಟ್ಟದಲ್ಲಿ ನಡೆಯುವ ರಾಜಕೀಯ ಕಾರಣದಿಂದಾಗಿ ಜಿಲ್ಲಾ ಮಟ್ಟದ ರಾಜ್ಯೋತ್ಸವ ಪ್ರಶಸ್ತಿ ಸಿಗದೇಇರುವುದು ಅಪ್ರತಿಮ ಕಲಾವಿದನಿಗೆ ಗೌರವ ಸಂದಲಿಲ್ಲ ಎಂಬುದು ವಿಷಾದದ ಸಂಗತಿಯಾಗಿದೆ.ಇಂತಹ ಸಂಕೋಚ ಭಾವದ ಕುರುಹಿನಶೆಟ್ಟಿ ಸಮಾಜದವರಾದ ಇವರಿಗೆ ರಾಜ್ಯ ಮಟ್ಟದ ಕನ್ನಡ ರಾಜ್ಯೋತ್ಸವ ಪ್ರಶಸ್ತಿ, ರಾಜ್ಯ ಮಟ್ಟದ ಶಿಲ್ಪಕಲಾ ಪ್ರಶಸ್ತಿ ಸೇರಿದಂತೆ ಅನೇಕ ಪ್ರಶಸ್ತಿಗಳನ್ನು ನೀಡಬೇಕಾಗಿದೆ. ಇದರಿಂದ ಅರ್ಹರಿಗೆ ಪ್ರಶಸ್ತಿಗೆ ಗೌರವ ಬರಲಿದೆ.ಇವರ ಬಗ್ಗೆ ಸಾಕಷ್ಟು ಪತ್ರಿಕೆಗಳಲ್ಲಿ ಸುದ್ದಿಯಾದರೂ ಸರಕಾರ ಇಂತಹ ಕಲಾವಿದನನ್ನು ಗುರುತಿಸಿ ಗೌರವಿಸಲಿ ಎಂದು ಆಶಿಸೋಣ. ಲೋಕೇಶ್. ಪುರಸಭೆ ಸದಸ್ಯರು. ಹೊಸಹೊಳಲು

Share News

About admin

Check Also

ಒಂದು ಬೆಕ್ಕಿನ ಗರ್ಭ… ಎರಡು ಮನೆಗಳ ಗಲಾಟೆ! ಕೊನೆಗೆ ಪೊಲೀಸರೇ ‘ವಿಚಿತ್ರ ತೀರ್ಪು’ ಕೊಟ್ಟ ಕಥೆ!

ನಾಲ್ಕು ಮರಿಗಳು ಹುಟ್ಟಿದವು… ಆದರೆ ಕಸ್ಟಡಿ ಯಾರಿಗೆ..? ಪೊಲೀಸರನ್ನೇ ಕಂಗೆಡಿಸಿದ ಪ್ರಕರಣ! ಬೆಕ್ಕು ಗರ್ಭಿಣಿ… ನೆರೆಹೊರೆಯವರ ಗಲಾಟೆ! ಬೆಂಗಳೂರಿನಲ್ಲಿ ‘ವಿಚಿತ್ರ’ …

Leave a Reply

Your email address will not be published. Required fields are marked *