Breaking News

ಸಿ.ಟಿ.ರವಿ ಮಾತಾಡಿರೋದಕ್ಕೆ ಲೆಕ್ಕ ಚುಕ್ತಾ ಮಾಡ್ತೀವಿ: ಕೇಸರಿಪಡೆ ವಿರುದ್ಧ ಡಿಕೆಶಿ ವಾಗ್ದಾಳಿ

ಬೆಂಗಳೂರು : ಬಿಜೆಪಿ MLC ಸಿ.ಟಿ.ರವಿ ಬಂಧನ ವಿಚಾರಕ್ಕೆ ಸಂಬಂಧಿಸಿದಂತೆ ಡಿಸಿಎಂ ಡಿಕೆಶಿ ಕೇಸರಿಪಡೆ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತಾಡಿದ ಅವರು, ಸಿಟಿ ರವಿ ಮಾತುಗಳು ಅವರ ಸಂಸ್ಕೃತಿಯನ್ನು ತೋರಿಸುತ್ತದೆ. ಅವರು ಮಾತಾಡಿರೋದಕ್ಕೆ ಲೆಕ್ಕ ಚುಕ್ತಾ ಮಾಡ್ತೀವಿ ಅಂತ ಕೆಂಡಕಾರಿದ್ದಾರೆ.
ಚಿಕ್ಕಮಗಳೂರು ಜನ ಬುದ್ಧಿವಂತರು, ಅವರಿಗೆ ಉತ್ತಮ ಸಂಸ್ಕೃತಿ ಇದೆ. ಸುಮ್ಮನೆ ಲೀಡರ್ ಗಳನ್ನು ಸಪೋರ್ಟ್ ಮಾಡೋದಲ್ಲ. ನಮ್ಮ ಪಕ್ಷದವರು ಆ ರೀತಿಯ ಅಶ್ಲೀಲ ಪದಬಳಕೆ ಮಾಡಿದ್ದಿದ್ರೂ, ಅದನ್ನ ಖಂಡಿಸಿತ್ತಿದ್ದೆ. ಈ ರೀತಿಯ ವರ್ತನೆಗೆ ತಕ್ಕ ಉತ್ತರ ಕೊಡುವ ಕಾಲ ಹತ್ತಿರವಿದೆ ಎಂದು ಡಿಸಿಎಂ ಗುಡುಗಿದರು.
ಬಿಜೆಪಿಯವರು ಯಾವ ಸಂಸ್ಕೃತಿಯವರು, ಸಿಟಿ ರವಿ ಎಂಥವರು ಎಂಬುದು ಗೊತ್ತು. ಕಾನೂನಿಗೆ ಗೌರವ ಕೊಡಬೇಕು ಅದನ್ನು ಕೊಡುತ್ತೇವೆ. ಮಾಡಿದ ತಪ್ಪನ್ನು ಮರೆಮಾಚುವುದು ಸರಿಯಲ್ಲ ಎಲ್ಲದಕ್ಕೂ ಉತ್ತರ ಕೊಡೋಣ ಎಂದು ಡಿಕೆಶಿ ಗುಡುಗಿದರು.

Share News

About BigTv News

Check Also

ರೀಲ್ಸ್ ಲೋಕದ ಚೆಲುವೆ ಶವವಾಗಿ ಪತ್ತೆ : ಅತ್ತ ಗಂಡ ವಶಕ್ಕೆ, ಇತ್ತ ಕಂದನ ಆಕ್ರಂದನ.. ಏನಾಯ್ತು..?

ತುಮಕೂರು: ತಾಲೂಕಿನ ಯಲ್ಲಾಪುರ ಗ್ರಾಮದಲ್ಲಿ 24 ವರ್ಷದ ಸುಷ್ಮಿತಾ ಎಂಬ ಯುವತಿ ನೇಣು ಬಿಗಿದ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾಗಿದ್ದು, ಎರಡೂವರೆ …

Leave a Reply

Your email address will not be published. Required fields are marked *