ಧಾರವಾಡ : ಪ್ರವಾದಿ ಮುಹಮ್ಮದ್ ಅವರ ಕುರಿತು ನಮ್ಮ ಪಕ್ಷದ ಮಾಜಿ ವಕ್ತಾರೆ ನೂಪುರ್ ಶರ್ಮಾ ನೀಡಿರುವ ಹೇಳಿಕೆ ಕುರಿತು ನಮ್ಮ ಪಕ್ಷ ಸ್ಪಷ್ಟವಾದ ನಿಲುವು ಕೈಗೊಂಡಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಅಶ್ವತ್ಥನಾರಾಯಣ ಹೇಳಿದರು .
ಧಾರವಾಡದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು , ಕೆಲವರು ಇದೇ ಸಂದರ್ಭವನ್ನು ಬಳಕೆ ಮಾಡಿಕೊಂಡು ಸಮಾಜದಲ್ಲಿ ಶಾಂತಿ ಕದಡುವ ಕೆಲಸ ಮಾಡುತ್ತಿದ್ದಾರೆ ಎಂದರು . ಕೆಲವು ಸಂಘಟನೆಗಳು ಕೂಡ ಈ ಘಟನೆಗೆ ಕೋಮು ಸ್ಪರ್ಶ ನೀಡುತ್ತಿವೆ .ಈ ರೀತಿಯ ಕೆಲಸ ಮಾಡಬಾರದು ಎಲ್ಲರೂ ಶಾಂತಿ- ಸೌಹಾರ್ದತೆಯಿಂದ ಕೂಡಿ ಬಾಳಲು ನಮ್ಮ ಸರ್ಕಾರ ಈಗಲೂ ಬದ್ಧವಿದೆ ಎಂದರು .
bigtvnews | Hubli Dharwad News | Kannada News | Karnataka News Hubli News | News In Hubli | Local news

