Breaking News

ದುಬಾರಿ ಕುದುರೆ ‘ರೋಲೆಕ್ಸ್’ ನೋಡಲು ಮುಗಿಬಿದ್ದ ಜನ!

ಚಿಕ್ಕಬಳ್ಳಾಪುರ ಜಿಲ್ಲೆ, ಗುಡಿಬಂಡೆ ತಾಲ್ಲೂಕಿನ ವರ್ಲಕೊಂಡ ಗ್ರಾಮದ ಬಳಿ ಒಂದು ವಿಚಿತ್ರವಾದ ದೃಶ್ಯ ಕಂಡುಬಂದಿದೆ. ಬರೋಬ್ಬರಿ 1 ಕೋಟಿ 17 ಲಕ್ಷ ಮೌಲ್ಯದ ‘ರೋಲೆಕ್ಸ್’ ತಳಿಯ ಕುದುರೆ ಗ್ರಾಮೀಣ ಪ್ರದೇಶದ ಜನರ ವೀಕ್ಷಣೆಗೆ ಪ್ರದರ್ಶನಕ್ಕೆ ಬಂದಿದ್ದು, ಈ ದುಬಾರಿ ಕುದುರೆಯನ್ನು ಕಣ್ತುಂಬಿಕೊಳ್ಳಲು ನೂರಾರು ಜನರು ಮುಗಿಬಿದ್ದು ಹರಿದು ಬಂದ ದೃಶ್ಯ ಇಂದು ವೈರಲ್ ಆಗಿದೆ.ಈ ಬಗ್ಗೆ ಮಾತನಾಡಿರುವ ಕುದುರೆ ಮಾಲೀಕ ಶಫೀರ್ ಅಹ್ಮದ್, ಚಿಕ್ಕಂದಿನಿಂದಲೂ ಕುದುರೆ ಸವಾರಿ ಮಾಡುವ ಆಸೆ ಇತ್ತು. ಹಾಗಾಗಿ ಕುದುರೆ ಸವಾರಿ ಕಲಿತೆ. ಆದರೆ ನನಗೆ ಮಾತ್ರ ಸೀಮಿತವಾಗದೇ, ನನ್ನ ಊರಿನ ಜನರಿಗೆ ಸಹ ಇದನ್ನು ಕಲಿಯಲು ಅವಕಾಶ ಸಿಗಬೇಕು ಎಂಬ ಕಾರಣದಿಂದ ಕುದುರೆಯನ್ನು ಫಾರ್ಮ್ ಹೌಸ್ ಗೆ ತಂದಿದ್ದೇನೆ ಎಂದಿದ್ದಾರೆ.

Share News

About BigTv News

Check Also

ಉಡುಪಿ: ಮದುವೆ ನಿರಾಕರಿಸಿದ ವ್ಯಕ್ತಿಯನ್ನು ಬೆದರಿಸಿ 42ಲಕ್ಷ ರೂ. ಹಣ ವಸೂಲಿ; ಶಿಕ್ಷಕಿ ಸಹಿತ ಇಬ್ಬರ ಬಂಧನ

ಉಡುಪಿ: ಮದುವೆ ಪ್ರಸ್ತಾಪ ನಿರಾಕರಿಸಿದ ವ್ಯಕ್ತಿಗೆ ಸುಳ್ಳು ಪ್ರಕರಣ ದಾಖಲಿಸುವುದಾಗಿ ಬೆದರಿಸಿ ₹42.97 ಲಕ್ಷ ವಸೂಲಿ ಮಾಡಿ ವಂಚಿಸಿದ ಆರೋಪದಲ್ಲಿ …

Leave a Reply

Your email address will not be published. Required fields are marked *