Breaking News

ಶತಮಾನೋತ್ಸವ: ಬೆಳಗಾವಿಯ ಸುವರ್ಣಸೌಧದ ಆವರಣದಲ್ಲಿ ಬೃಹತ್ ಗಾಂಧಿ ಪ್ರತಿಮೆ ಅನಾವರಣ

ಬೆಳಗಾವಿ: ಮಹಾತ್ಮಾ ಗಾಂಧೀಜಿಯವರ ಅಧ್ಯಕ್ಷತೆ ವಹಿಸಿದ್ದ 1924ರ ಕಾಂಗ್ರೇಸ್ ಅಧಿವೇಶನಕ್ಕೆ ನೂರು ವರ್ಷಗಳು ಪೂರ್ಣಗೊಂಡಿದೆ. ಹೀಗಾಗಿ ರಾಜ್ಯ ಸರ್ಕಾರದಿಂದ ಅದ್ಧೂರಿ ಶತಮಾನೊತ್ಸವ ಕಾರ್ಯಕ್ರಮ ನಡೆಯಲಿದೆ. ವಿವಿಧೆಡೆ ಕಾಂಗ್ರೆಸ್ ಸಮಾವೇಶಗಳು ನಡೆಯುತ್ತಿವೆ.
ಇತ್ತ ಬೆಳಗಾವಿಯ ಸುವರ್ಣಸೌಧದಲ್ಲಿ ಆವರಣದಲ್ಲಿ ಮಹಾತ್ಮಾ ಗಾಂಧೀಜಿಯವರ ಪುತ್ಥಳಿ ಅನಾವರಣಗೊಳ್ಳಲಿದೆ.
ಸುವರ್ಣಸೌಧದಲ್ಲಿ ಶುಕ್ರವಾರ ಡಿಸೆಂಬರ್ 27 ಗಾಂಧಿ ಪ್ರತಿಮೆ ಅನಾವರಣ ಮಾಡಲು ಸರ್ಕಾರ ಯೋಜಿಸಿದೆ. ಈ ಸಂಬಂಧ ಬುಧವಾರ ಪುತ್ಥಳಿ ಅನಾವರಣ ಸಮಾರಂಭದ ಪೂರ್ವಸಿದ್ಧತೆಗಳನ್ನು ಪ್ರವಾಸೊದ್ಯಮ ಇಲಾಖೆ ಸಚಿವರಾದ ಎಚ್.ಕೆ.ಪಾಟೀಲ ಅವರು‌ ಪರಿಶೀಲಿಸಿದರು.
ಈ ವೇಳೆ ಮಾತನಾಡಿದ ಅವರು, ಶತಮಾನೋತ್ಸವವನ್ನು ಅರ್ಥಪೂರ್ಣ ಆಚರಣೆಗಾಗಿ ಮಹಾತ್ಮಾ ಗಾಂಧೀಜಿಯವರ ತತ್ವಾದರ್ಶ ದೇಶದ ಪ್ರತಿಯೊಬ್ಬರಿಗೆ ಪರಿಚಯಿಸುವ ಕಾರ್ಯಕ್ರಮ ರೂಪಿಸಲಾಗಿದೆ. ಶತಮಾನೋತ್ಸವ ಭಾಗವಾಗಿ ಗಾಂಧೀಜಿ ಪುತ್ಥಳಿ ಇಲ್ಲಿ ಸ್ಥಾಪಿಸಲಾಗಿದೆ.
ಮಹಾತ್ಮಾ ಗಾಂಧೀಜಿಯವರ ಅಧ್ಯಕ್ಷತೆಯಲ್ಲಿ 1924ರಲ್ಲಿ ಜರುಗಿದ ಅಧಿವೇಶನ ಕೇವಲ ಪಕ್ಷದ ಅಧಿವೇಶನವಾಗಿರದೇ, ಸಾಮಾಜಿಕ‌ ಸುಧಾರಣೆಯ ಅಸ್ತ್ರವಾಗಿತ್ತು. ನಾಡಿನಲ್ಲಿದ್ದ ಅಸ್ಪ್ರಶ್ಯತೆಯನ್ನು ನಿವಾರಿಸಿ ಭ್ರಾತೃತ್ವ ಭಾವನೆ ಬೆಸೆಯುವುದರ ಮೂಲಕ ಸ್ವಾತಂತ್ರ್ಯ ಹೋರಾಟಕ್ಕೆ ಅವರು ಶಕ್ತಿ ತುಂಬಿದ್ದರು.

Share News

About BigTv News

Check Also

ಮದುವೆಯಾಗಿ ಮಕ್ಕಳಿದ್ರೂ ಅಕ್ರಮ ಸಂಬಂಧ: ರೈಲಿಗೆ ತಲೆಕೊಟ್ಟು ವಿವಾಹಿತೆಯೊಂದಿಗೆ ಯುವಕ ಆತ್ಮಹತ್ಯೆ

ಮಂಡ್ಯದ ವಿಸಿ ಫಾರಂ ರಸ್ತೆಯ ರೈಲ್ವೆ ಹಳಿಯಲ್ಲಿ ರೈಲಿಗೆ ತಲೆಕೊಟ್ಟು ವಿವಾಹಿತೆ ಸಹನಾ (25) ಮತ್ತು ರಾಹುಲ್ (23) ಆತ್ಮಹತ್ಯೆಗೆ …

Leave a Reply

Your email address will not be published. Required fields are marked *