ಧಾರವಾಡ: ಉತ್ತರ ಕರ್ನಾಟಕದ ಮೊದಲನೇಯ ಮಹಿಳೆಯರ ಓಎಪ್‌ಪಿನಲ್ಲಿ ಸ್ವಾವಲಂಬಿ ಸಕಿ ಪ್ರೋಡ್ಯೂಜರ್ ಕಂಪನಿಯ 150 ಮಹಿಳೆಯರು ತಾವು ತಯಾರಿಸಿದ ಕರಕುಶಲ ವಸ್ತುಗಳನ್ನು ಹುಬ್ಬಳ್ಳಿಯ ವಿದ್ಯಾನಗರ ಶಿರೂರ ಪಾರ್ಕ್ ನಲ್ಲಿ ಅಥೆಂಟಿಕ್ ಕರ್ನಾಟಕ ಮಳಿಗೆಯಲ್ಲಿ ಹಾಗೂ ಏರ್‌ಪೋರ್ಟ್ ನಲ್ಲಿ ಅವಸರ್ ಸ್ಟಾಲ್ ನ್ನು ನಬಾರ್ಡ್ ನ ಸಹಯೋಗದೊಂದಿಗೆ ಸ್ಥಾಪಿಸಿ ಉತ್ತಮ ವ್ಯವಹಾರವನ್ನು ಮಾಡಿ ಸಫಲರಾಗಿದ್ದಾರೆ. ಸಕಿ ಪ್ರೋಡ್ಯುಜರ್ ಕಂಪನಿಯ ನಾಲ್ಕನೇಯ ವಾರ್ಷಿಕ ಸರ್ವಸಾಧಾರಣ ಸಭೆಯನ್ನು ಇದೇ ಡಿ.23 ರಂದು ನಗರದ ಜೆಎಸ್ಎಸ್ ಕಾಲೇಜಿನ ಉತ್ಸವ ಹಾಲ್‌ನಲ್ಲಿ ಹಮ್ಮಿಕೊಳ್ಳಲಾಗಿತ್ತು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಐಎಎಸ್ ಅಧಿಕಾರಿ ಶ್ರೀಮತಿ ಗಂಗೂಬಾಯಿ ಮಾನಕರ್ ಅವರು ಕಂಪನಿಯಲ್ಲಿ ತಯಾರಿಸುವ ವಸ್ತುಗಳ ಗುಣಮಟ್ಟ ಪ್ಯಾಕಿಂಗ್ ಎಲ್ಲವೂ ಒಳ್ಳೆಯ ರೀತಿಯಾಗಿದ್ದಲ್ಲಿ ಮಾರಾಟ ಹೆಚ್ಚಳ ಸಾಧ್ಯವೆಂದು ತಿಳಿಸಿ ಒಳ್ಳೆಯ ರೀತಿಯಲ್ಲಿ ನಡೆಸಿಕೊಂಡು ಹೊಗಲು ಸಲಹೆ ನೀಡಿದರು.
ಮಹಿಳಾ ಉದ್ಯಮಿ ಶ್ರಾವಣಿ ಪವಾರ ಅವರು ಮಾತನಾಡಿ ನಾಲ್ಕು ಗೋಡೆ ಮಧ್ಯ ಇದ್ದಂತಹ ಮಹಿಳೆಯರು ಇಂದು ಇಷ್ಟು ದೊಡ್ಡ ಕಂಪನಿಯನ್ನು ಬೆಳೆಸಿದ್ದು ಹೆಮ್ಮೆಯ ವಿಷಯ ಹಾಗೂ ಬೇರೆ ಹೆಣ್ಣು ಮಕ್ಕಳಿಗೆ ಈ ಕಂಪನಿಯು ಆದರ್ಶವಾಗಿದೆ ಎಂದು ಹೆಮ್ಮೆಪಟ್ಟರು. ಸವಿತಾ ತೀಟೆ, ಶ್ರೀಯುತ ಪ್ರತಾಪ ಬಿ, ಮಯೂರ ಕಾಂಬಳೆ ಮಾತನಾಡಿದರು.
ಶ್ರೀಮತಿ ಸರ್ವಮಂಗಳಾ ಮೋತಿ ವಾರ್ಷಿಕ ವರದಿ ಓದಿದರು. ಶ್ರೀಮತಿ ಚಿನ್ಮಯಿ ಪಾಟೀಲ ಪ್ರಾರ್ಥಿಸಿದರು, ಶ್ರೀಮತಿ ಸಂಜನಾ ಫಾಯದೆ ಕಾರ್ಯಕ್ರಮ ನಿರೂಪಣೆ ಮಾಡಿದರು. ಶ್ರೀಮತಿ ಮೇಘಾ ಬಣಗಾರ ಅವರ ವ೦ದನಾರ್ಪಣೆಯೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು. ಕಂಪನಿಯ ಎಲ್ಲ ನಿರ್ದೇಶಕರು ಹಾಗೂ ಶೇರುದಾರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
bigtvnews | Hubli Dharwad News | Kannada News | Karnataka News Hubli News | News In Hubli | Local news




