Breaking News

ಕನಕದಾಸರ ಜಯಂತಿ ಆಚರಣೆ

ನವಲಗುಂದ: ಕನಕದಾಸರ ನಿರಂತರ ಸಾಧನೆ, ಬದುಕಿನ ಅನುಭವಗಳು, ಆಧ್ಯಾತ್ಮಿಕತೆ ಹಾಗೂ ಕನಕದಾಸರ ದಾಸ ಸಾಹಿತ್ಯವು ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ನೀಡಿದ ಅಮೋಘ ಕೊಡುಗೆಯಾಗಿದೆ. ಕನಕದಾಸರು ಶ್ರೇಷ್ಠ ಸಂತ, ವರ ಕವಿ, ಕೀರ್ತನೆಕಾರ, ಕರ್ನಾಟಕದ ದಾಸ ಸಾಹಿತ್ಯದ ಅಶ್ವಿನಿ ದೇವತೆಗಳಲ್ಲಿ ಒಬ್ಬರು ಎಂದು ಡಾ. ನಾಗರತ್ನ ಕುರಡೇಕರ ಹೇಳಿದರು.

ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಇಂದು ಹರಿಭಕ್ತ, ದಾಸಶ್ರೇಷ್ಠ ಕನಕದಾಸರ ಜಯಂತಿಯನ್ನು ಆಚರಿಸಲಾಯಿತು. ಈ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಅವರು ಮಾತನಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಕಾಲೇಜಿನ ಪ್ರಾಂಶುಪಾಲರಾದ ಡಾ. ಎಮ್ ಬಿ ಬಾಗಡಿ ಅಂದಿನ ಸಮಾಜದ ಕೆಳಸ್ತರದ ವ್ಯಕ್ತಿಯೊಬ್ಬ, ಜನಮನ ಸೂರೆಗೊಂಡು, ಯಾವ ಒಂದು ಮತಕ್ಕೆ ಅಂಟಿಕೊಳ್ಳದೆ, ಸಕಲ ತತ್ವಗಳನ್ನು ಮೀರಿ ಬೆಳೆದ ವಿಶ್ವಮಾನವ ಕನಕದಾಸರು, ಆಸೆ ದುರಾಸೆ ಜಾತಿ ಭೇದದಿಂದ ತಲ್ಲಣ ಗೊಂಡಿರುವ ಇಂದಿನ ಸಮಾಜಕ್ಕೆ ಇವರ ಬದುಕು ಸಾಂತ್ವನದ ಸಂಜೀವಿನಿ ಎಂದರು.

ಈ ವೇಳೆ ಸವಿತಾ ಚಿಕ್ಕನವರ, ಸಂತೋಷ ಹುಬ್ಬಳ್ಳಿ, ಈಶ್ವರ ಸಾತಿಹಾಳ, ಪ್ರಸನ್ನ ಪಂಡರಿ, ಬಿ ಬಿ ಏಣಗಿ, ಗಣೇಶ ದೊಂಗಡಿ ವಿನಾಯಕ ಮಿರಜಕರ ಇತರರು ಉಪಸ್ಥತರಿದ್ದರು.

Share News

About Shaikh BigTv

Check Also

ರೀಲ್ಸ್ ಲೋಕದ ಚೆಲುವೆ ಶವವಾಗಿ ಪತ್ತೆ : ಅತ್ತ ಗಂಡ ವಶಕ್ಕೆ, ಇತ್ತ ಕಂದನ ಆಕ್ರಂದನ.. ಏನಾಯ್ತು..?

ತುಮಕೂರು: ತಾಲೂಕಿನ ಯಲ್ಲಾಪುರ ಗ್ರಾಮದಲ್ಲಿ 24 ವರ್ಷದ ಸುಷ್ಮಿತಾ ಎಂಬ ಯುವತಿ ನೇಣು ಬಿಗಿದ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾಗಿದ್ದು, ಎರಡೂವರೆ …

Leave a Reply

Your email address will not be published. Required fields are marked *