ಹುಬ್ಬಳ್ಳಿ ಖಡಕ್ ಖಾಕಿ ಕಾರ್ಯಾಚರಣೆ: ಕೊಲೆಗಡುಕರ ಹೆಡೆಮುರಿ..
ಕ್ರೌರ್ಯ ಮೆರೆದಿದ್ದವರನ್ನು ಕಂಬಿ ಹಿಂದೆ ಅಟ್ಟಿದ ಖಾಕಿ ಕಹಾನಿ..
ಹುಬ್ಬಳ್ಳಿ: ಬೆಂಡಿಗೇರಿ ಠಾಣೆ ವ್ಯಾಪ್ತಿಯಲ್ಲಿ ಗುರುವಾರ ನಡೆದಿದ್ದ ಕೊಲೆ ಪ್ರಕರಣವನ್ನು ಕೆಲವೇ ಗಂಟೆಯಲ್ಲಿ ಬೇಧಿಸುವಲ್ಲಿ ಬೆಂಡಿಗೇರಿ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದಾರೆ.
ಹೌದು, ಮಂಟೂರ ರಸ್ತೆಯ ನಿವಾಸಿ ಸ್ಯಾಮ್ಯುಯೆಲ್ ಮಬ್ಬು (38) ಎಂಬಾತನನ್ನು ನಗರದ ಹೊರವಲಯದ ರಿಂಗ್ ರೋಡ್ ಬಳಿಯಲ್ಲಿ ಕಣ್ಣಿಗೆ ಖಾರದ ಪುಡಿ ಎರಚಿ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಲಾಗಿತ್ತು.

ಕೊಲೆ ಮಾಹಿತಿ ಸಿಗುತ್ತಿದ್ದಂತೆಯೇ ಬೆಂಡಿಗೇರಿ ಠಾಣೆಯ ಪೊಲೀಸರು ಸ್ಥಳಕ್ಕೆ ದಾವಿಸಿ ಪರಿಶೀಲನೆ ನಡೆಸಿದರು. ಹಿರಿಯ ಅಧಿಕಾರಿಗಳು ಕೂಡ ಘಟನಾ ಸ್ಥಳಕ್ಕೆ ದೌಡಾಯಿಸಿ ಶೀಘ್ರ ಕೊಲೆ ಪ್ರಕರಣವನ್ನು ಬೇಧಿಸಲು ಸೂಚನೆ ನೀಡಿದ್ದರು.
ಅದರಂತೆ ಉತ್ತರ ವಿಭಾಗದ ಎಸಿಪಿ ಚಿಕ್ಕಮಠ ಹಾಗೂ ಬೆಂಡಿಗೇರಿ ಠಾಣೆಯ ಇನ್ಸ್ಪೆಕ್ಟರ್ ಎಸ್.ಆರ್.ನಾಯಕ PSI ರವಿ ವಡ್ಡರ ಹಾಗೂ ಕ್ರೈಂ ಸಿಬ್ಬಂದಿಗಳ
ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಕೆಲವೇ ಗಂಟೆಯಲ್ಲಿ ಬಂಧಿಸುವುದಷ್ಟೇ ಅಲ್ಲ ಕೊಲೆಗೆ ಕಾರಣ ಏನೆಂಬುದು ತನಿಖೆಯಿಂದ ಹೊರಗೆ ಎಳೆದಿದ್ದಾರೆ.
ಬಂಧಿತರನ್ನು ಟೈಟನ್ ಬಾಬು ಆಂಥೋನಿ, ಸುಲೇಮಾನ್ ಬಳ್ಳಾರಿ, ಮೌಲಾಸಾಬ್ ರಾಮಜಿಯಾನವರ್ ಹಾಗೂ ಮೊಹಮದ್ ಶಾ ಫಿರೋಜಾಬಾದ್ ಎಂದು ತಿಳಿದುಬಂದಿದೆ.
ಕೊಲೆಗೆ ಕಾರಣ..??
ಈ ಹಿಂದೆ ಮೃತ ಸ್ಯಾಮ್ಯುಯೆಲ್’ನ ಅಕ್ಕ ಮತ್ತು ಅವಳ ಗಂಡನ ನಡುವೆ ಜಗಳ ನಡೆದಿತ್ತು. ನಂತರ ಅಕ್ಕ ತನ್ನ ತವರು ಮನೆಗೆ ಸೇರಿದ್ದಳು. ಇದಕ್ಕೆ ಅಳಿಯ ಸ್ಯಾಮ್ಯುಯೆಲ್ ಕಾರಣ ಎಂದು ಮಾವ ಟೈಟನ್ ಬಾಬು ಕೊಪಗೊಂಡಿದ್ದ. ಹಾಗೂ ಮೌಲಾ ಮತ್ತು ಮೊಹಮದ್ ಜೊತೆಗೆ ಹಣಕಾಸಿನ ವ್ಯವಹಾರ ಕೂಡ ಇಟ್ಟುಕೊಂಡಿದ್ದ. ನಿಮಗೆ ಇಂಪೋರ್ಟ್ ಎಕ್ಸಪೋರ್ಟ್ ಬಿಸಿನೆಸ್ ತಿಳಿಸಿಕೊಡುವ ನೆಪ ಹೇಳಿ ಹಣ ಪಡೆದಿದ್ದನಂತೆ. ಇದೇ ಕಾರಣಕ್ಕೆ ಕೊಲೆಗೆ ಎರಡು ಬಾರಿ ಪ್ರಯತ್ನ ಕೂಡ ಮಾಡಿದ್ದರಂತೆ. ಆದರೆ ಸ್ವಲ್ಪದರಲ್ಲಿಯೇ ಸ್ಯಾಮ್ಯುಯೆಲ್ ಪಾರಾಗಿ ಜೀವ ಉಳಿಸಿಕೊಂಡಿದ್ದ, ಆದರೆ ಗುರುವಾರ ರಾತ್ರಿ ಮಾತ್ರ ಟೈಟಾನ್ ತನ್ನ ಸ್ನೇಹಿತರೊಂದಿಗೆ ಪ್ಲಾನ್ ಮಾಡಿ ಸ್ಯಾಮ್ಯುಯೆಲ್’ಗೆ ರಿಂಗ್ ರೋಡ್ ಹತ್ತಿರ ಕರೆಸಿಕೊಂಡು ಕಣ್ಣಿಗೆ ಖಾರದ ಪುಡಿ ಎರಚಿ ಮಾರಕಾಸ್ತ್ರಗಳಿಂದ ಕೊಚ್ಚಿ ಮನಬಂದಂತೆ ಹೊಡೆದು ಕೊಲೆ ಮಾಡಿರುವ ಬಗ್ಗೆ ತನಿಖೆಯಲ್ಲಿ ತಿಳಿದು ಬಂದಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

