Breaking News

ಹಳ್ಳಿಯಿಂದ ದಿಲ್ಲಿವರೆಗೂ ನಂದಿನಿ ಕ್ಷೀರಧಾರೆ: ತಿಂಗಳಿಗೆ ₹75 ಕೋಟಿ ವಹಿವಾಟು

ಮಂಡ್ಯ: ಗುಣಮಟ್ಟಕ್ಕೆ ಹೆಸರುವಾಸಿಯಾಗಿರುವ ‘ನಂದಿನಿ ಹಾಲು’ ಈಗ ರಾಜ್ಯದ ಆಚೆಗೂ ಕಾಲಿರಿಸಿದ್ದು, 6 ರಾಜ್ಯಗಳಲ್ಲಿ ತನ್ನ ಮಾರುಕಟ್ಟೆ ವಿಸ್ತರಿಸಿಕೊಂಡು ಗ್ರಾಹಕರ ಮೆಚ್ಚುಗೆಗೆ ಪಾತ್ರವಾಗಿದೆ.
ಹೌದು, ಈಗ ಹಳ್ಳಿಯಿಂದ ದಿಲ್ಲಿವರೆಗೂ ‘ನಂದಿನಿ’ ಕ್ಷೀರಧಾರೆ ಹರಿಯುತ್ತಿದೆ.
ರಾಷ್ಟ್ರದ ರಾಜಧಾನಿ’ ದೆಹಲಿಗೆ ಮಂಡ್ಯದಿಂದ ನಂದಿನಿ ಹಾಲು ಪೂರೈಕೆಯಾದರೆ, ‘ವಾಣಿಜ್ಯ ರಾಜಧಾನಿ’ ಮುಂಬೈಗೆ ತುಮಕೂರಿನಿಂದ ಹಾಲು ಸಾಗಣೆಯಾಗುತ್ತಿದೆ.
ಮುತ್ತುಗಳ ನಗರ’ ಹೈದರಾಬಾದ್‌ಗೆ ಹಾಸನದಿಂದ, ಚೆನ್ನೈ ಮತ್ತು ಕೇರಳಕ್ಕೆ ಮೈಸೂರಿನಿಂದ, ತಮಿಳುನಾಡಿನ ನೀಲಗಿರಿ ಮತ್ತು ಕೇರಳಕ್ಕೆ ಚಾಮರಾಜನಗರದಿಂದ, ಗೋವಾ ಮತ್ತು ಪುಣೆಗೆ ಬೆಳಗಾವಿಯಿಂದ, ವಿದರ್ಭ ಮತ್ತು ಸೊಲ್ಲಾಪುರಕ್ಕೆ (ಮಹಾರಾಷ್ಟ್ರ) ವಿಜಯಪುರದಿಂದ ನಂದಿನಿ ಹಾಲು ಪೂರೈಕೆಯಾಗುತ್ತಿದೆ.
ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಮಹಾಮಂಡಳ (ಕೆ.ಎಂ.ಎಫ್‌) ‘ನಂದಿನಿ ಬ್ರ್ಯಾಂಡ್‌’ ವಿಸ್ತರಿಸುವ ಉದ್ದೇಶದಿಂದ ರಾಜ್ಯದ ವಿವಿಧ ಹಾಲು ಉತ್ಪಾದಕರ ಒಕ್ಕೂಟಗಳಿಂದ 6 ರಾಜ್ಯಗಳಿಗೆ ನಿತ್ಯ 4.35 ಲಕ್ಷ ಲೀಟರ್‌ ಹಾಲು, 66 ಸಾವಿರ ಲೀಟರ್‌ ಮೊಸರು ಪೂರೈಸುತ್ತಿದೆ. ಇದರಿಂದ ನಿತ್ಯ 2.47 ಕೋಟಿ ವಹಿವಾಟು ನಡೆಸುತ್ತಿದೆ. ತಿಂಗಳಿಗೆ ಸರಾಸರಿ ₹75 ಕೋಟಿ ವಹಿವಾಟು ಇದೆ.

Share News

About BigTv News

Check Also

ಅಕ್ರಮ ಕಲ್ಲು ಸಾಗಾಟದ ವಿರುದ್ಧ ಕಾರ್ಯಾಚರಣೆ: 9 ಲಾರಿಗಳು, ನಾಲ್ಕು ಹಿಟಾಚಿ ಸಹಿತ ಸೊತ್ತುಗಳು ವಶ

ಉಡುಪಿ: ಕಾರ್ಕಳ ತಾಲೂಕಿನಲ್ಲಿ ಅಕ್ರಮ ಕಲ್ಲು ಸಾಗಾಟದ ವಿರುದ್ಧ ಪೊಲೀಸರು ಕಾರ್ಯಾಚರಣೆ ನಡೆಸಿ, ಹಲವರನ್ನು ಬಂಧಿಸಿ ಲಾರಿ, ಟಿಪ್ಪರ್, ಹಿಟಾಚಿ …

Leave a Reply

Your email address will not be published. Required fields are marked *