ನವದೆಹಲಿ: ಮಾಜಿ ಪ್ರಧಾನಿ ದಿವಂಗತ ಡಾ.ಮನಮೋಹನ್ ಸಿಂಗ್ ಅವರ ಸ್ಮಾರಕ ನಿರ್ಮಿಸಲು ರಾಷ್ಟ್ರೀಯ ಸ್ಮೃತಿ ಸ್ಥಳ ಆವರಣದಲ್ಲಿ ಎರಡು ಜಾಗಗಳನ್ನು ಗುರುತಿಸಿ, ಗೃಹನಿರ್ಮಾಣ ಮತ್ತು ನಗರ ವ್ಯವಹಾರಗಳ ಸಚಿವಾಲಯ ಪ್ರಸ್ತಾವ ಮುಂದಿಟ್ಟಿದೆ. ಗುರುವಾರ ನಡೆದ ಉನ್ನತ ಮಟ್ಟದ ಸಭೆಯ ಬಳಿಕ ಈ ಪ್ರಸ್ತಾವ ಮುಂದಿಟ್ಟಿದ್ದು, ಇದರೊಂದಿಗೆ ಸ್ಮಾರಕಕ್ಕೆ ಜಾಗ ಹಂಚಿಕೆ ಪ್ರಕ್ರಿಯೆ ಅಧಿಕೃತವಾಗಿ ಚಾಲನೆ ಪಡೆದಂತಾಗಿದೆ.
ರಾಷ್ಟ್ರೀಯ ಸ್ಮೃತಿ ಸ್ಥಳ ಆವರಣ ಯಮುನಾ ನದಿ ದಂಡೆಯಲ್ಲಿದ್ದು, ದೇಶದ ರಾಷ್ಟ್ರಪತಿ, ಉಪರಾಷ್ಟ್ರಪತಿಗಳು ಮತ್ತು ಪ್ರಧಾನಿಗಳ ಅಂತ್ಯಸಂಸ್ಕಾರ ನೆರವೇರಿಸಲು ಮತ್ತು ಸ್ಮಾರಕ ನಿರ್ಮಿಸಲು ನಿಗದಿಪಡಿಸಿದ ಪ್ರದೇಶವಾಗಿರುತ್ತದೆ.
ಸಚಿವಾಲಯ ಗುರುವಾರ ಸಿಂಗ್ ಅವರ ಕುಟುಂಬಗ್ಗೆ ಈ ಸಲಹೆಗಳನ್ನು ಪ್ರಸ್ತುತಪಡಿಸಿದ್ದು, ಕುಟುಂಬದವರು ಸ್ಥಳವನ್ನು ಆಯ್ಕೆ ಮಾಡಲಿದ್ದಾರೆ. ಕುಟುಂಬದಿಂದ ದೃಢೀಕರಣವನ್ನು ಪಡೆದ ಬಳಿಕ, ಸ್ಮಾರಕದ ನಿರ್ಮಾಣ ಮತ್ತು ನಿರ್ವಹಣೆ ಮಾಡುವ ಟ್ರಸ್ಟ್ ಗೆ ಭೂಮಿಯನ್ನು ಹಂಚಿಕೆ ಮಾಡಲಾಗುತ್ತದೆ.
ಇಂದು ಸಚಿವಾಲಯದಲ್ಲಿ ನಡೆದ ಸಭೆಯಲ್ಲಿ ರಾಷ್ಟ್ರೀಯ ಸ್ಮೃತಿ ಸ್ಥಳದ ಎರಡು ನಿವೇಶನಗಳನ್ನು ಸಿಂಗ್ ಅವರ ಸ್ಮಾರಕಕ್ಕಾಗಿ ಗುರುತಿಸಲಾಗಿದೆ. ಬಳಿಕ ಕುಟುಂಬಕ್ಕೆ ಕೂಡಾ ಮಾಹಿತಿ ನೀಡಿ ಲಭ್ಯವಿರುವ ಎರಡು ಆಯ್ಕೆಗಳನ್ನು ತಿಳಿಸಲಾಗಿದೆ. ಸ್ಥಳವೀಕ್ಷಣೆ ಬಳಿಕ ಕುಟುಂಬವು ರನ್ನ ನಿರ್ಧಾರವನ್ನು ಸಚಿವಾಲಯಕ್ಕೆ ತಿಳಿಸಲಿದೆ. ಆ ಬಳಿಕ ಸಚಿವಾಲಯ ಹಂಚಿಕೆ ಮಾಡುತ್ತದೆ” ಎಂದು ಸಚಿವಾಲಯದ
ಟ್ರಸ್ಟ್ ರಚನೆಯ ಬಗ್ಗೆ ರೂಪುರೇಷೆ ಸಿದ್ಧಪಡಿಸುವುದು ಮಾಜಿ ಪ್ರಧಾನಿಯ ಕುಟುಂಬದ ವಿಶೇಷಾಧಿಕಾರ. ಟ್ರಸ್ಟಿಗಳ ಹೆಸರು ಮತ್ತು ಸಂಖ್ಯೆಯನ್ನು ಕುಟುಂಬ ಸದಸ್ಯರು ನಿರ್ಧರಿಸಲಿದ್ದಾರೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

