Breaking News

ಸಿದ್ದಾರ್ಥ ಸಾವಿನ ಬಗ್ಗೆ ಪ್ರಾಮಾಣಿಕ ತನಿಖೆಗೆ ಎಸ್.ಆರ್.ಹಿರೇಮಠ ಆಗ್ರಹ

ಹುಬ್ಬಳ್ಳಿ: ಕಾಪಿ ಡೇ ಮಾಲೀಕ ವ್ಹಿ.ಜಿ.ಸಿದ್ಧಾರ್ಥ್ಅವರ ನಿಗೂಡ ಸಾವಿನ ಹಿಂದೆ ಇರುವಕೈವಾಡದ ಕುರಿತು ಪ್ರಮಾಣಿಕ ತನಿಖೆಯಾಗಬೇಕುಎಂದು ಸಮಾಜ ಪರಿವರ್ತನಾ ಸಮುದಾಯದಮುಖಂಡರಾದ ಎಸ್.ಆರ್.ಹಿರೇಮಠ ಆಗ್ರಹಿಸಿದರು.ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದಅವರು, ಡಾರ್ಕ್ ಪೈಬರ್, ಕೊಲೋಶನ್ ಬಹುದೊಡ್ಡ ಹಗರಣವಾಗಿದ್ದು, ಇದರ ಮುಖ್ಯಸ್ಥರಾಗಿ ವಿ.ಜಿ.ಸಿದ್ಧಾರ್ಥ್ ಅವರು ಕೂಡ ಇದ್ದಾರೆ ಎಂದರು. ವೇ ಟೂ ವೆಲ್ತ್ ಹಾಗೂ ಅಲ್ಪಾಗ್ರಾಫ್ ಕಂಪನಿಗಳು ಸಿಂಗಪೂರ್ಹಾಗೂ ಹಾಂಗ್ ಕಾಂಗದಲ್ಲಿದರುವ ತನಿಖಾ ಸಂಸ್ಥೆ ‘ಸೆಬಿ’ ರೂ.14.5 ಕೋಟಿ ಮೊತ್ತದ ದಂಡವನ್ನು ಕೂಡ ವಿಧಿಸಿದ್ದಾರೆ. ಅಲ್ಲದೇ ಸಿದ್ಧಾರ್ಥ ಅವರು ತಮ್ಮ ಸಾವಿನ ಮೊದಲು ಬರೆದ ಪತ್ರ ಸತ್ಯವನ್ನು ಮರೆಮಾಚಲು ಮಾಡಿರುವ ಹುನ್ನಾರ ಎಂದು ಮೇಲ್ನೋಟಕ್ಕೆ ಕಂಡುಬರುತ್ತದೆ ಎಂದು ಅವರು ಹೇಳಿದರು. ತನಿಖಾ ಸಂಸ್ಥೆಗಳು ಪ್ರಮಾಣಿಕ ತನಿಖೆ ಮಾಡಿ ನ್ಯಾಯಕ್ಕೆ ಅಪಚಾರವಾಗದಂತೆ ಕೆಲಸನಿರ್ವಹಿಸುವಂತೆ ಒತ್ತಾಯಿಸಿದರು.ಇತ್ತಿಚೆಗೆ ಮಾಜಿ ಸ್ಪೀಕರ್ ರಮೇಶಕುಮಾರ 17 ಶಾಸಕರನ್ನು ಅನರ್ಹಗೊಳಿಸಿ ಸಾಮಾಜಿಕವಾಗಿ ಇಂತಹ ಜನಪ್ರತಿನಿಧಿಗಳನ್ನು ತಿರಸ್ಕರಿಸುವಂತೆಕರೆ ನೀಡಿದ್ದು, ಸ್ವಾಗತಾರ್ಹವಾಗಿದೆ. ಪ್ರಜಾಪ್ರಭುತ್ವವನ್ನು ಕೆಳಮಟ್ಟಕ್ಕೆ ಕುಸಿಯುವಂತೆ ಮಾಡುತ್ತಿರುವ ಜೆಸಿಬಿ ಪಕ್ಷಗಳಿಗೆ ಈ ನಿರ್ಣಯ ಒಂದು ಪಾಠ ಕಲಿಸಿದ್ದು, ಮುಂದೆ ಈ ತರಹದ ದುಸ್ಸಾಹದ ಮಾಡದಂತೆ ಸಂದೇಶ ರವಾನಿಸಿರುವುದು ಸೂಕ್ತವಾದ ಕ್ರಮವಾಗಿದೆ ಎಂದು ಅವರು ಹೇಳಿದರು

Share News

About admin

Check Also

ಒಂದು ಬೆಕ್ಕಿನ ಗರ್ಭ… ಎರಡು ಮನೆಗಳ ಗಲಾಟೆ! ಕೊನೆಗೆ ಪೊಲೀಸರೇ ‘ವಿಚಿತ್ರ ತೀರ್ಪು’ ಕೊಟ್ಟ ಕಥೆ!

ನಾಲ್ಕು ಮರಿಗಳು ಹುಟ್ಟಿದವು… ಆದರೆ ಕಸ್ಟಡಿ ಯಾರಿಗೆ..? ಪೊಲೀಸರನ್ನೇ ಕಂಗೆಡಿಸಿದ ಪ್ರಕರಣ! ಬೆಕ್ಕು ಗರ್ಭಿಣಿ… ನೆರೆಹೊರೆಯವರ ಗಲಾಟೆ! ಬೆಂಗಳೂರಿನಲ್ಲಿ ‘ವಿಚಿತ್ರ’ …

Leave a Reply

Your email address will not be published. Required fields are marked *