ಹುಬ್ಬಳ್ಳಿ: ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ಬಳಿ ಬೆಳಗಿನ ಸುಮಾರು 4 ಗಂಟೆಗೆ ರಸ್ತೆ ಅಪಘಾತ ನಡೆದಿದೆ. ವಾರಕ್ಕೊಮ್ಮೆ ದುಡಿಮೆಗಾಗಿ ನಾವು ಹೋಗ್ತಾ ಇದ್ವಿ ಇವತ್ತು ನಮಗೆ ಹಣ್ಣುಗಳು ಇಲ್ಲ ಅಂತ ನಾನು ಹೋಗಿಲ್ಲ ಆದರೆ ನನ್ನ ಸ್ನೇಹಿತರೆಲ್ಲ ಹೋಗಿದ್ರು. ಸಾವನ್ನಪ್ಪಿದವರಲ್ಲಿ ಇತ್ತೀಚೆಗೆ ಮದುವೆಯಾದವರು ಸಹ ಇದ್ದಾರೆ. ಎರಡು ತಿಂಗಳು ಹಾಗೂ ಒಂದು ವರ್ಷದ ಹಿಂದೆ ಮದುವೆಯಾದ ನನ್ನ ಸ್ನೇಹಿತರಿದ್ದರು ಅವರೆಲ್ಲ ಬಹಳ ಬಡತನದಲ್ಲಿದ್ದವರು ಅವರ ಕುಟುಂಬಕ್ಕೆ ಸರ್ಕಾರದಿಂದ ಪರಿಹಾರ ನೀಡಬೇಕು ಎಂದು ಮೃತರ ಸ್ನೇಹಿತ ಇಮ್ರಾನ್ ಪರಿಹಾರಕ್ಕಾಗಿ ಆಗ್ರಹಿಸಿದ್ದಾರೆ.
ಅಪಘಾತದಲ್ಲಿ ಚಿಕಿತ್ಸೆ ಫಲಿಸದೆ ಮತ್ತೋರ್ವ ಸಾವು, ಜಲಾಲ ಬಾಷಾ(26) ಮೃತ ವ್ಯಕ್ತಿ, ಮೃತನು ಹಾವೇರಿ ಜಿಲ್ಲೆಯ ಸವಣೂರು ನಿವಾಸಿ. ಸ್ಥಳದಲ್ಲಿಯೇ 9 ಜನ ಸಾವನ್ನಪ್ಪಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

