Breaking News

ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ಬಳಿ ರಸ್ತೆ ಅಪಘಾತ ಪ್ರಕರಣ: ಗಾಯಾಳುಗಳಿಗೆ ಚಿಕಿತ್ಸೆ ನೀಡಲು ಕಿಮ್ಸ್ ಹಿಂದೇಟು ಆರೋಪ

ಹುಬ್ಬಳ್ಳಿ: ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ಬಳಿ ರಸ್ತೆ ಅಪಘಾತದಲ್ಲಿ ಗಾಯಾಳುಗಳಿಗೆ ಚಿಕಿತ್ಸೆ ನೀಡಲು ಕಿಮ್ಸ್‌ ಹಿಂದೇಟು ಹಾಕಿದ್ದು, ಬೆಳಿಗ್ಗೆ 6 ಗಂಟೆಗೆ ಕಿಮ್ಸ್ ಸರಿಯಾಗಿ ಚಿಕಿತ್ಸೆ ನೀಡಲಿಲ್ಲ ಚಿಕಿತ್ಸೆ ನೀಡಿದ್ರೆ ಇವತ್ತು ಒಂದು ಸಾವು ಆಗುತ್ತಿರಲಿಲ್ಲ ಎಂದು ಮೃತರ ಕುಟುಂಬಸ್ಥರು ಆರೋಪಿಸಿದ್ದಾರೆ.

ಮೊದಲು ಚೀಟಿ ಮಾಡಿಕೊಂಡು ಬನ್ನಿ, ಆಮೇಲೆ ಚಿಕಿತ್ಸೆ ಕೊಡುತ್ತೆವೆಂದು ಕಿಮ್ಸ್ ಸಿಬ್ಬಂದಿ ನಿರ್ಲಕ್ಷ್ಯ ಮಾಡಿದ್ದಕ್ಕೆ ಮತ್ತೊಂದು ಸಾವಾಗಿದೆ ಎನ್ನುತ್ತಿರುವ ಮೃತರ ಸಂಬಂಧಿ ಇಸ್ಮಾಯಿಲ್ ಅಕ್ಕಿ ಉಳಿದ ಗಾಯಾಳುಗಳಿಗೆ ಸರಿಯಾದ ಚಿಕಿತ್ಸೆ ನೀಡಬೇಕು ಎಂದು ಕಿಮ್ಸ್ ಆಸ್ಪತ್ರೆಯಲ್ಲಿ ಕುಟುಂಬಸ್ಥರು ಅಳಲನ್ನು ತೊಡಿಕೊಂಡಿದ್ದಾರೆ.

ಈ ವಿಚಾರಕ್ಕೆ ಕಿಮ್ಸ್ ನಿರ್ದೇಶಕ ಎಸ್ ಎಫ್ ಕಮ್ಮಾರ್ ಪ್ರತಿಕ್ರಿಯೆ ನೀಡಿದ್ದು, ಬೆಳಗಿನ ಜಾವ 6:30ಕ್ಕೆ ಯಲ್ಲಾಪುರ ಹತ್ತಿರ ಅವಘಡ ಸಂಭವಿಸಿದೆ, 26 ಕೂಲಿ ಕಾರ್ಮಿಕರು ಅಪಘಾತಕ್ಕಿಡಾಗಿದ್ದಾರೆ. ನಮ್ಮಲ್ಲಿ 11 ಜನ ಬಂದಿದ್ದರು, ಅದರಲ್ಲಿ ಒಬ್ಬ ಸ್ಥಳದಲ್ಲೇ ತೀರಿಹೋಗಿದ್ದ. ಗಾಯಾಳುಗಳಿಗೆ ಬೇಕಾದ ಚಿಕಿತ್ಸೆ ಈಗಾಗಲೇ ನೀಡಲಾಗಿದೆ. ಡಾ.ರಾಜಶೇಖರ್ ನೇತೃತ್ವದ ತಂಡದಿಂದ ಚಿಕಿತ್ಸೆ ನೀಡಲಾಗುತ್ತಿದೆ. 24 ಅಥವಾ 48 ಗಂಟೆ ನಾವು ಏನು ಹೇಳಲಾಗಲ್ಲ ಆದರೆ ಗಾಯಾಳುಗಳನ್ನು ಈಗ ತೀವ್ರ ನಿಗಾ ಘಟಕದಲ್ಲಿ ಇಟ್ಟಿದ್ದೇವೆ.

ಚಿಕಿತ್ಸೆ ನೀಡಲು ಕಿಮ್ಸ್ ವೈದ್ಯರ ಹಿಂದೇಟು ಆರೋಪಕ್ಕೆ ಸಂಬಂಧಿಸಿದಂತೆ ಏಕಾಏಕಿ 10 ಗಾಯಾಳು ಬಂದಾಗ ಎಲ್ಲಾ ಅವರನ್ನ ನೋಡಿದ್ದಾರೆ. ಚಿಕಿತ್ಸೆಗಾಗಿ ಬಂದ ಗಾಯಾಳುಗಳಿಗೆ ಮೊದಲು ಚಿಕಿತ್ಸೆ ನೀಡಲು ಸೂಚನೆ ನೀಡಿದ್ದೇನೆ. ಹೆಸರು, ಆಧಾರ್ ಕಾರ್ಡ್ ಕೇಳಿದ್ದು ಅಷ್ಟೇ, ಚಿಕಿತ್ಸೆಗೆ ಅಲ್ಲಾ ಉಳಿದ ಹಾಗೆ ನಾವು ಅವರ ಮೇಲೆ ಸೂಕ್ತ ಕ್ರಮ ಕೈಗೊಳ್ಳುತ್ತೇನೆ ಎಂದು ಕಿಮ್ಸ್ ನಿರ್ದೇಶಕ ಎಸ್.ಎಫ್.ಕಮ್ಮಾರ್ ತಿಳಿಸಿದ್ದಾರೆ.

Share News

About Shaikh BigTv

Check Also

TCS ನಾಸಿಕ್ ಪ್ರಕರಣ: ಆರೋಪಿ ನಿದಾ ಖಾನ್ ಪತಿ ಬಂಧನ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್) ಶಾಖೆಯ ಸುತ್ತಲಿನ ವಿವಾದ ನಾಟಕೀಯ ತಿರುವು ಪಡೆದುಕೊಂಡಿದ್ದು, ಕಂಪನಿಗೆ ಸಂಬಂಧಿಸಿದ ಒಂಬತ್ತು …

Leave a Reply

Your email address will not be published. Required fields are marked *