Breaking News

ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಶಾಲಾ ಆರಂಭೋತ್ಸವಕ್ಕೆ ಚಾಲನೆ

ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಶಾಲಾ ಆರಂಭೋತ್ಸವಕ್ಕೆ ಚಾಲನೆ

ಧಾರವಾಡ ತಾಲೂಕಿನ ಹೆಬ್ಬಳ್ಳಿ ಗ್ರಾಮದ ಸರಕಾರಿ ಕಿರಿಯ ಉರ್ದು ಪ್ರಾಥಮಿಕ ಶಾಲೆಯಲ್ಲಿ ಶಾಲಾ ಆರಂಭೋತ್ಸವಕ್ಕೆ ಚಾಲನೆ ನೀಡಲಾಯಿತು,

ಗ್ರಾಮದ ಪಂಚಾಯತ್ ಸದಸ್ಯರಾದ ಗೀತಾ ದೇಸಾಯಿ, ಶ್ರೀಮತಿ ಮಹಾದೇವಿ ಗುಡಸಲಮನಿ ಆಗಮಿಸಿದ್ದರು, ಇದೇ ಸಂದರ್ಭದಲ್ಲಿ ಉಚಿತ ಸಮವಸ್ತ್ರವನ್ನು ವಿತರಿಸಲಾಯಿತು, ಶಾಲಾಭಿವೃದ್ದಿ ಹಾಗೂ ಮೇಲುಸ್ತುವಾರಿ ಸಮಿತಿಯ ಅದ್ಯಕ್ಷರಾದ ಮೌಲಾಸಾಬ ದೊಡಮನಿ ಮುಖ್ಯ ಶಿಕ್ಷಕಿ ಬಿ ಎಂ ಸುತಾರ, ಸಹಶಿಕ್ಷಕಿ ಕೆ ಎಂ ಶಿವಳ್ಳಿ ಸಹಶಿಕ್ಷಕ ಎಲ್ ಐ ಲಕ್ಕಮ್ಮನವರ ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ಮಕ್ಕಳಿಗೆ ಮಕ್ಕಳಿಂದ ದೀಪ ಬೆಳಗಿಸಿ ಮಾತನಾಡಿದ ಶಾಲಾಭಿವೃದ್ದಿ ಹಾಗೂ ಮೇಲುಸ್ತುವಾರಿ ಸಮಿತಿಯ ಅದ್ಯಕ್ಷರಾದ ಮೌಲಾಸಾಬ ಸವಣೂರ, ರೈತರು ಹೇಗೆ ಜೂನ ತಿಂಗಳಿನಲ್ಲಿ ತಮ್ಮ ಜಮೀನು ಉಳಿಮೆ ಮಾಡಿ ಬೀಜ ಬಿತ್ತಿ ಒಳ್ಳೆಯ ಫಸಲು ತೆಗೆಯುವ ಹಾಗೆ, ಜೂನ ತಿಂಗಳು ಆರಂಭ ಆದ ತಕ್ಷಣ ಬೇಸಿಗೆ ರಜೆ ಮುಗಿಸಿ,ಶಾಲೆ ಪುನರ್ ಆರಂಭ ಆಗುತ್ತವೆ, ಜೂನ ತಿಂಗಳು ನಮ್ಮ ಶಿಕ್ಷಕರು ಅಕ್ಷರದ ಬೀಜ ಬಿತ್ತಿ ಉತ್ತಮ ಒಳ್ಳೆಯ ನಾಗರೀಕರನ್ನಾಗಿ ಮಾಡಿ, ಮಕ್ಕಳಿಗೆ ಸಂಸ್ಕಾರ ನೈತಿಕ ಶಿಕ್ಷಣದ ಮೂಲಕ ಒಳ್ಳೆಯ ಫಲವನ್ನು ಮಕ್ಕಳ ಮೂಲಕ ಪಡೆಯಲು ಇಂದು ಶಾಲೆ ಆರಂಭವಾಗಿದೆ, ಆರು ವರ್ಷ ತುಂಬಿದ ಎಲ್ಲಾ ಮಕ್ಕಳಿಗೆ ಪಾಲಕರು ಶಾಲೆಗೆ ದಾಖಲ ಮಾಡುವಂತೆ ಕರೆ ನೀಡಿದರು, ಕನ್ನಡ ಶಿಕ್ಷಕ ಎಲ್ ಐ ಲಕ್ಕಮ್ಮನವರ ಸ್ವಾಗತಿಸಿ ನಿರೂಪಿಸಿ ವಂದಿಸಿದರು.

Share News

About BigTv News

Check Also

ವಿಟ್ಲ: 35 ಬಾರಿ ವಾರಂಟ್ ಜಾರಿಯಾಗಿದ್ದ ಆರೋಪಿ ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಂಧನ

ಕಳೆದ ಒಂಬತ್ತು ವರ್ಷಗಳಿಂದ ವಿವಿಧ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿ, ನ್ಯಾಯಾಲಯದ ವಿಚಾರಣೆಗೆ ಹಾಜರಾಗದೆ ವಿದೇಶದಲ್ಲಿ ತಲೆಮರೆಸಿಕೊಂಡಿದ್ದ ಕುಖ್ಯಾತ ಆರೋಪಿಯನ್ನು ವಿಟ್ಲ …

Leave a Reply

Your email address will not be published. Required fields are marked *