Breaking News

ಬೆಳಗಾವಿ: 11 ದಿನಗಳ ಚಳಿಗಾಲ ಅಧಿವೇಶನಕ್ಕೆ ₹19.3 ಕೋಟಿ ರೂ. ವೆಚ್ಚ

ಬೆಳಗಾವಿ: ಇಲ್ಲಿನ ಸುವರ್ಣ ವಿಧಾನ ಸೌಧದಲ್ಲಿ ಡಿಸೆಂಬರ್ 9ರಿಂದ 19ರವರೆಗೆ ನಡೆಯುವ 13ನೇ ಚಳಿಗಾಲದ ಅಧಿವೇಶನಕ್ಕೆ ₹19.3 ಕೋಟಿಗೂ ಹೆಚ್ಚು ವೆಚ್ಚ ಅಂದಾಜಿಸಲಾಗಿದೆ. ಪ್ರತಿ ವರ್ಷ ವೆಚ್ಚದಲ್ಲಿ ಶೇ 10ರಷ್ಟು ಹೆಚ್ಚಳ ಆಗುವುದು ಸಹಜ. ಆದರೆ, ಈ ಬಾರಿ ಅದನ್ನೂ ಕಡಿಮೆ ಮಾಡಲು ಜಿಲ್ಲಾಡಳಿತ ಕಸರತ್ತು ನಡೆಸಿದೆ.
ಅಧಿವೇಶನದ ವೆಚ್ಚ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲೇ ಇದೆ. ಕಳೆದ ವರ್ಷ (2023) ₹17 ಕೋಟಿ ಅಂದಾಜಿಸಲಾಗಿತ್ತು. ಕೊನೆಗೆ ₹23 ಕೋಟಿ ವೆಚ್ಚವಾಗಿತ್ತು. 2022ರಲ್ಲಿ ₹17.50 ಕೋಟಿ ವೆಚ್ಚವಾಗಿತ್ತು. 2012ರಲ್ಲಿ ನಡೆದ ಮೊದಲ ಅಧಿವೇಶನಕ್ಕೆ ₹7.39 ಕೋಟಿ ವೆಚ್ಚವಾಗಿತ್ತು. ಪ್ರತಿವರ್ಷ ನಿರೀಕ್ಷೆಗೂ ಮೀರಿ ವೆಚ್ಚ ಹೆಚ್ಚುತ್ತಿದೆ.
ಈ ಬಾರಿ ಜಿಲ್ಲಾಡಳಿತ ₹13.8 ಕೋಟಿ ಮತ್ತು ಪೊಲೀಸ್ ಇಲಾಖೆ ₹5.5 ಕೋಟಿ ವೆಚ್ಚ ಮಾಡಲು ಸಿದ್ಧವಾಗಿವೆ. ಇದರೊಂದಿಗೆ ಲೋಕೋಪಯೋಗಿ, ಸಾರಿಗೆ, ಪೊಲೀಸ್‌, ಹೆಸ್ಕಾಂ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಗಳೂ ತಮ್ಮ ಇಲಾಖೆಯ ಅನುದಾನ ಬಳಸಿಕೊಳ್ಳುತ್ತವೆ. ಅಧಿವೇಶನ ಮುಗಿದ ಬಳಿಕ ಅದರ ಲೆಕ್ಕ ಸಿಗಲಿದೆ ಎಂಬುದು ಅಧಿಕಾರಿಗಳ ಮಾತು.
ಎಲ್ಲಕ್ಕಿಂತ ಹೆಚ್ಚು ವೆಚ್ಚ ವಸತಿ ಹಾಗೂ ಊಟಕ್ಕೆ ಆಗುತ್ತದೆ. ಅದರಲ್ಲೇ ಉಳಿತಾಯ ಮಾಡಲು ಅಧಿಕಾರಿಗಳು ಯೋಚಿಸಿದ್ದಾರೆ. ಕಳೆದ ಬಾರಿ ಜನಪ್ರತಿನಿಧಿಗಳು, ಅಧಿಕಾರಿಗಳು ಮತ್ತು ಸಿಬ್ಬಂದಿ ಊಟಕ್ಕೆ ಪ್ರತಿದಿನ ₹5 ಲಕ್ಷ ಖರ್ಚಾಗಿದೆ.

Share News

About BigTv News

Check Also

ನಕಲಿ ದಾಖಲೆ ಮೂಲಕ ನಿವೇಶನ ಕಬಳಿಕೆ ; ಸಿಸಿಬಿ ಪೊಲೀಸರಿಂದ ಆರೋಪಿ ಬಂಧನ

ಮಾಜಿ ಸಂಸತ್ ಸದಸ್ಯೆ ತೇಜಸ್ವಿನಿ ಗೌಡ ಅವರ ಸಹೋದರನಿಗೆ ಸೇರಿದ ನಿವೇಶನವನ್ನು ನಕಲಿ ದಾಖಲೆಗಳನ್ನು ಸೃಷ್ಟಿಸಿ ಕಬಳಿಸಿದ ಪ್ರಕರಣದಲ್ಲಿ, ಆರ್.ಎಂ.ವಿ. …

Leave a Reply

Your email address will not be published. Required fields are marked *