ಇದು ಮಂಗಳೂರು ಜೈಲಿನ ಕರ್ಮಕಾಂಡದ ಕೇಸ್ . ಕೈದಿಗಳಿಗೆ ಕಳ್ಳ ಮಾರ್ಗದಲ್ಲಿ ಗಾಂಜಾ ಸಪ್ಲಯ್ ಮಾಡುತ್ತಿರುವ ಪ್ರಕರಣ ಬೆಳಕಿಗೆ ಬಂದಿದೆ. ಜೈಲಿನ ಹೊರಗಿನಿಂದ ಗಾಂಜಾ ಪ್ಯಾಕೆಟ್ ಎಸೆದು ಎಸ್ಕೇಪ್ ಆದರೂ ಅಪರಾಧಿಗಳು. ಈ ಬಗ್ಗೆ ಮಾತನಾಡಿದ ಕಮಿಷನರ್ ಅನುಪಮ ಅಗರ್ವಾಲ್ ಹೇಳಿಕೆ ಬೈಕ್ ನಂಬರ್ ಪ್ಲೇಟ್ ಇರಲಿಲ್ಲ ಅಪರಾಧಿಗಳನ್ನು ಪತ್ತೆ ಹಚ್ಚುವ ಕಾರ್ಯದಲ್ಲಿದ್ದೇವೆ ಎಂದು ಹಾರಿಕೆ ಉತ್ತರ ನೀಡಿದ್ದಾರೆ . 15 ದಿನಗಳಾದರು ಗಾಂಜಾ ಗಿರಾಕಿಗಳ ಸುಳಿವಿಲ್ಲ. ಈ ನಡೆ ಪೊಲೀಸರ ಮೇಲೆ ಅನುಮಾನ ಹುಟ್ಟಿಸುವಂತೆ ಮಾಡಿದೆ. ಹಾಗಾದರೆ ಡ್ರಗ್ಸ್ ಪೂರೈಕೆ ಮಾಡಿದವರು ಯಾರು? ಪ್ಯಾಕೆಟ್ ಎಸೆದ ಅಪರಾಧಿಗಳು ಎಲ್ಲಿ ಹೋದರು ಎಂಬ ಪ್ರಶ್ನೆಗೆ ಉತ್ತರ ನಿರೀಕ್ಷಿಸಬೇಕಾಗಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

