ಆಟವಾಡುತ್ತಿದ್ದ ಮಗು ತಾನು ಕರೆದ ತಕ್ಷಣ ಬರಲಿಲ್ಲವೆಂಬ ಕಾರಣಕ್ಕೆ 3 ವರ್ಷದ ಬಾಲಕಿಯ ಮೇಲೆ ಚಿಕ್ಕಪ್ಪ ಮಾರಣಾಂತಿಕ ಹಲ್ಲೆ ನಡೆಸಿರುವ ಅಮಾನವೀಯ ಘಟನೆ ಮೈಸೂರಿನಲ್ಲಿ ನಡೆದಿದೆ.ತನ್ನ ಚಿಕ್ಕಪ್ಪನ ದುಷ್ಕೃತ್ಯಕ್ಕೆ 3 ವರ್ಷದ ಬಾಲಕಿ ಜಾನ್ವಿ ತನ್ನ ಕೈಮುರಿದುಕೊಂಡು ಪರಿತಪಿಸುವಂತಾಗಿದೆ. ಗಂಭೀರ ಗಾಯಗೊಂಡ ಜಾನ್ವಿಗೆ ಹುಣಸೂರು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಹುಣಸೂರು ಗ್ರಾಮಾಂತರ ಠಾಣೆ ಪೊಲೀಸರು ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

