Breaking News

ಗಣ್ಯರಿಂದ ಲೀಲಾವತಿಯವರಿಗೆ ಅಂತಿಮ ನಮನ…

ವಯೋಸಹಜ ಅನಾರೋಗ್ಯದಿಂದ ಕೊನೆಯುಸಿರೆಳೆದ ಹಿರಿಯ ನಟಿ ಲೀಲಾವತಿ ಅಂತ್ಯಕ್ರಿಯೆ ಸಿದ್ಧತೆ ನಡೀತಿದೆ. ಸದ್ಯ ಪಾರ್ಥೀವ ಶರೀರವನ್ನು ರವೀಂದ್ರ ಕಲಾಕ್ಷೇತ್ರದಲ್ಲಿ ಇರಿಸಲಾಗಿದ್ದು ರಾಜಕೀಯ ಮುಖಂಡರು, ಕಲಾವಿದರು ಬಂದು ಅಂತಿಮ ನಮನ ಸಲ್ಲಿಸುತ್ತಿದ್ದಾರೆ. ಮಧ್ಯಾಹ್ನ 3 ಗಂಟೆ ಸುಮಾರಿಗೆ ಪಾರ್ಥೀವ ಶರೀರವನ್ನು ನೆಲಮಂಗಲದ ಸೋಲದೇವನಹಳ್ಳಿಗೆ ಕೊಂಡೊಯ್ಸು ತೋಟದಲ್ಲಿ ಅಂತ್ಯಕ್ರಿಯೆ ನಡೆಸಲಾಗುತ್ತದೆ.

ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್, ಮಾಜಿ ಸಿಎಂ ಯಡಿಯೂರಪ್ಪ, ಹಿರಿಯ ನಟ ಶ್ರೀನಾಥ್, ದ್ವಾರಕೀಶ್ ನಟಿಯರಾದ ಪೂಜಾ ಗಾಂಧಿ, ಶ್ರುತಿ, ಸುಧರಾಣಿ ಸೇರಿದಂತೆ ಹಲವರು ಲೀಲಾವತಿಯವರಿಗೆ ಅಂತಿಮ ನಮನ ಸಲ್ಲಿಸಿದ್ದಾರೆ. ಅವರ ಸಿನಿಮಾ, ಒಡನಾಟ ಎಲ್ಲದರ ಬಗ್ಗೆಯೂ ಮಾತನಾಡಿದ್ದಾರೆ. ಅಗಲಿದ ಚೇತಕ್ಕೆ ಸಂತಾಪ ಸೂಚಿಸಿದ್ದಾರೆ.

ಕಲಾಕ್ಷೇತ್ರದಲ್ಲಿ ಅಂತಿಮ ದರ್ಶನ ಪಡೆದ ಬಳಿಕ ಮಾತನಾಡಿದ ಸಿಎಂ ಸಿದ್ದರಾಮಯ್ಯ “ಲೀಲಾವತಿಯವರ ಕೊಡುಗೆ ಅಪಾರ. ಚಿತ್ರರಂಗದಲ್ಲಿ ನಾವು ಅವರ ಸಾಧನೆಯನ್ನು ನೋಡಿದ್ದೇವೆ. ಲೀಲಮ್ಮ ನಿಧನಕ್ಕೆ ಸಂತಾಪ ವ್ಯಕ್ತಪಡಿದುತ್ತೇನೆ. ವಾರದ ಹಿಂದೆ ನಾನು ಮನೆಗೆ ಭೇಟಿ ನೀಡಿದ್ದೆ. ಪುತ್ರ ವಿನೋದ್‌ಗೆ ತಾಯಿ ಕಂಡ್ರೆ ತುಂಬಾ ಪ್ರೀತಿ. ತಾಯಿಯನ್ನ ಚೆನ್ನಾಗಿ ನೋಡ್ಕೋ ಎಂದು ಹೇಳಿದ್ದೆ. ಸರ್ಕಾರದಿಂದ ಸಹಾಯ ಬೇಕಿದ್ರೆ ಕೇಳು ಅಂದಿದ್ದೆ. ಸರ್ಕಾರದ ಗೌರವಗಳು ಲೀಲಾವತಿಯವರಿಗೆ ಸಲ್ಲುತ್ತದೆ”

Share News

About BigTv News

Check Also

ಇನ್ಸ್‌ಪೆಕ್ಟರ್ ಪೋಲಿ ಮಾತು ವೈರಲ್! ರಾಸಲೀಲೆ ಆರೋಪ ಸದ್ದು!

ಯಶು ಬೇಬಿ ಆಡಿಯೋ ಲೀಕ್! ಇನ್ಸ್‌ಪೆಕ್ಟರ್ ಪೋಲಿ ಮಾತು ವೈರಲ್.. ಯಶು ಬೇಬಿ ಆಡಿಯೋ ಲೀಕ್! ಖಾಕಿ ಮೇಲೆ ಕಪ್ಪು …

Leave a Reply

Your email address will not be published. Required fields are marked *