Breaking News
Oplus_131072

ಕುಡಿಯೋ ನೀರಿನಿಂದ ಮುರಿದುಬಿದ್ದ ಮದುವೆ ಬೆಳಗಾಗೋದ್ರಲ್ಲಿ ಮದುವೆ ಬೇಡ ಎಂದ ವಧು.

ಚಿತ್ರದುರ್ಗದ ಹಿರಿಯೂರಿನ ಬಲಿಜ ಕಲ್ಯಾಣ ಮಂಟಪದಲ್ಲಿ ಜಗಳೂರು ಮೂಲದ ಮನೋಜ್ ಕುಮಾರ್, ಶಿರಾ ಮೂಲದ ಯುವತಿ ಮದುವೆ ನಿಶ್ಚಯಾಗಿತ್ತು. ರಾತ್ರಿ ವರನ ಕಡೆಯವರಿಗೆ ವಧು ಕಡೆಯವರು ಕುಡಿಯಲು ನೀರು ಕೊಡದೆಯಿರುವ ವಿಚಾರಕ್ಕೆ ಕಿರಿಕ್ ಆಗಿದ್ಯಂತೆ.ಈ ವಿಚಾರವಾಗಿ ಎರಡು ಕಡೆಯವರ ನಡುವೆ ಜಗಳ ಜೋರಾಗಿ ಮನಸ್ತಾಪ ಏರ್ಪಟ್ಟಿದೆ.ಇದೇ ನೆಪವೊಡ್ಡಿ ಮದುವೆಗೆ ವಧು ನಿರಾಕರರಿಸುವುದಾಗಿ ತಿಳಿದುಬಂದಿದೆ.ಮದುವೆಗೆ ಒಪ್ಪುವಂತೆ ವರನ ಕಡೆಯವರು ಕೇಳಿಕೊಂಡರೂ ಒಪ್ಪಲಿಲ್ಲ. ವರ ಮನೋಜ್‌ಕುಮಾರ್‌ ಮತ್ತು ವಧು ಅನಿತಾ ಬೆಂಗಳೂರಿನ ಖಾಸಗಿ ಸಾಫ್ಟ್‌ವೇರ್‌ ಕಂಪನಿಯಲ್ಲಿ ಎಂಜಿನಿಯರ್‌ಗಳಾಗಿ ಕೆಲಸ ಮಾಡುತ್ತಿದ್ದಾರೆ. ಪರಸ್ಪರ ಒಪ್ಪಿ ಮದುವೆಗೆ ಮುಂದಾಗಿದ್ದರು. ಆದರೆ ಕ್ಷುಲ್ಲಕ ಕಾರಣಕ್ಕೆ ಮದುವೆ ನಿಂತ ಕಾರಣ ಎರಡೂ ಕಡೆಯವರು ನಿರಾಶೆಯಿಂದ ಮರಳಿದರು.

Share News

About BigTv News

Check Also

ಬೆಂಗಳೂರಿನಲ್ಲಿ ಮತ್ತೊಂದು ನಕಲಿ ಔಷಧ ಜಾಲ ಪತ್ತೆ, 90ಕ್ಕೂ ಹೆಚ್ಚು ಆಸ್ಪತ್ರೆಗಳಿಗೆ ಪೂರೈಕೆಯಾಗಿತ್ತು ಫೇಕ್ ಮೆಡಿಸಿನ್

ಬೆಂಗಳೂರು: ಮಿನರ್ವ್ ಸರ್ಕಲ್‌ನ ಕೃಪಾ ಹೆಲ್ತ್‌ಕೇರ್‌ ಮೇಲೆ ಎಸ್‌ಐಟಿ ಹಾಗೂ ಔಷಧ ನಿಯಂತ್ರಣ ಇಲಾಖೆ ಜಂಟಿಯಾಗಿ ದಾಳಿ ನಡೆಸಿ ನಕಲಿ …

Leave a Reply

Your email address will not be published. Required fields are marked *