ಜಗದೀಪ್ ರೋಹ್ಟಕ್‌ನ ಬಾಬಾ ಮಸ್ತ್‌ನಾಥ್ ವಿಶ್ವವಿದ್ಯಾಲಯದಲ್ಲಿ ಶಿಕ್ಷಕನಾಗಿದ್ದು, ಮೂರು ವರ್ಷಗಳಿಂದ ಜನತಾ ಕಾಲೋನಿಯಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದ ಎನ್ನಲಾಗಿದ್ದು, ಪೊಲೀಸರ ಹಂಚಿಕೊಂಡಿರುವ ಮಾಹಿತಿ ಪ್ರಕಾರ ಪ್ರಮುಖ ಆರೋಪಿ ರಾಜ್‌ಕರನ್ , ಜಗದೀಪ್ ಫೋನ್‌ನಲ್ಲಿ ತನ್ನ ಪತ್ನಿಯ ಫೋಟೋ ನೋಡಿದ್ದಾನೆ.ಇದರಿಂದ ಕುಪಿತಗೊಂಡ ರಾಜ್‌ಕರನ್ ಮನಸ್ಸಲ್ಲಿ ತನ್ನ ಪತ್ನಿ ಹಾಗೂ ಜಗದೀಪ್ ಇಬ್ಬರ ಮಧ್ಯೆ ಅನೈತಿಕ ಸಂಬಂಧ ಇದೆ ಎಂಬ ಅನುಮಾನ ಮೂಡಿದೆ. ಈ ಹಿನ್ನಲೆ ರಾಜ್‌ಕರನ್ ಜಗದೀಪ್ ಅನ್ನು ಹತ್ಯೆಗೈಲು ಮುಂದಾಗಿದ್ದು, ಹರ್ದೀಪ್ ಮತ್ತು ಅವನ ಕೆಲವು ಸ್ನೇಹಿತರು ಸಂಚು ರೂಪಿಸಿ ಕೊಲೆ ಮಾಡಿದ್ದಾರೆ ಎಂದಿದ್ದಾರೆ.ಹರ್ದೀಪ್ ಮತ್ತು ಅವನ ಸ್ನೇಹಿತ ಧರ್ಮಪಾಲ್ ರನ್ನು ಬಂಧಿಸಿ ವಿಚಾರಿಸಿದಾಗ ಸಾಕಷ್ಟು ಸಾಕ್ಷಿಗಳು ದೊರೆತಿದ್ದು. ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ಖಾಕಿ ವಶಕ್ಕೆ ಪಡೆಡಿದ್ದಾರೆ. ಪೊಲೀಸ್ ಅಧಿಕಾರಿಗಳು ಇಬ್ಬರನ್ನೂ ವಿಚಾರಣೆಗೆ ಒಳಪಡಿಸಿದರು
bigtvnews | Hubli Dharwad News | Kannada News | Karnataka News Hubli News | News In Hubli | Local news

