-ಧಾರವಾಡ ಮಹಾನಗರ ಪಾಲಿಕೆಯ ಮಹಾಪೌರರಾದ
ಈರೇಶ ಅಂಚಟಗೇರಿ ಕೆಲಗೇರಿ ಬಡಾವಣೆಗಳಿಗೆ ಭೇಟಿ ನೀಡಿ, ಕೆಲಗೇರಿ ಕೆರೆಗೆ ಸರೋವರ ನಗರ ಹಾಗೂ ಇನ್ನಿತರ ಕಡೆಯಿಂದ ಕೊಳಚೆ ನೀರು ಬಂದು ಸಂಗ್ರಹವಾಗುತ್ತಿರುವ ಹಿನ್ನೆಲೆಯಲ್ಲಿ ಸರೋವರ ನಗರ ಹಾಗೂ ಇನ್ನಿತರ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಅಲ್ಲಿನ ಸಮಸ್ಯೆಗಳನ್ನು ಅರಿತು, ಕೂಡಲೇ ಕೆಲಗೇರಿ ಕೆರೆಯ ಮುಖಾಂತರ ಹೊರಹೋಗುವ ನಾಲಾ ನೀರನ್ನು ಸ್ವಚ್ಛಗೊಳಿಸಬೇಕು. ಹಾಗೂ ಕೂಡಲೇ ಉನ್ನತ ಗುಣಮಟ್ಟದ ಕಾಮಗಾರಿಯನ್ನು ಕೈಗೊಳ್ಳುವ ಮೂಲಕ ಸಂಪೂರ್ಣ ಕೆಲಗೇರಿ ಕೆರೆ ಹಾಗೂ ಹೊರಾಂಗಣಕ್ಕೆ ಹೋಗುತ್ತಿರುವ ನೀರನ್ನು ಸ್ವಚ್ಛಗೊಳಿಸುವ ಮೂಲಕ ಕೆರೆಯನ್ನು ಸುಂದರೀಕರಣಗೊಳಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ಪಾಲಿಕೆಯ ಸದಸ್ಯರಾದ ಶ್ರೀಮತಿ ಚಂದ್ರಕಲಾ ಕೋಟಬಾಗಿ ನಾರಾಯಣ ಚಳಗೇರಿ , ಪಾಲಿಕೆಯ ಅಧಿಕಾರಿಗಳು, ಸ್ಥಳೀಯರಾದ ಶರತ್ ಬಾಬು , ಹಾಗೂ ನಾಗರಿಕರು ಉಪಸ್ಥಿತರಿದ್ದರು.
bigtvnews | Hubli Dharwad News | Kannada News | Karnataka News Hubli News | News In Hubli | Local news




