ವೆಂಕಟೇಶ್ ಮತ್ತು ನೀಲವೇಣಿ ಮದುವೆಯಾಗಿ 16 ವರ್ಷ ಆಗಿತ್ತು. ಇಬ್ಬರು ಹೆಣ್ಣು ಮಕ್ಕಳು, ಒಬ್ಬ ಗಂಡು ಮಗನಿದ್ದಾನೆ. ಆದ್ರೆ ನೀಲವೇಣಿಗೆ ಶಾಮಿಯಾನ ವ್ಯವಹಾರ ಮಾಡುತ್ತಿದ್ದ ಆನಂದ್ ಜೊತೆ ಅಕ್ರಮ ಸಂಬಂಧ ಇತ್ತು. ನೀಲವೇಣಿ ಮತ್ತು ಆನಂದ್ ಇಬ್ಬರೂ ಸೇರಿ ಶಾಮಿಯಾನ ವ್ಯವಹಾರ ಮಾಡುತ್ತಿದ್ದರು. ಪತ್ನಿಯ ಅನೈತಿಕ ಸಂಬಂಧದ ಬಗ್ಗೆ ವೆಂಕಟೇಶ್ಗೆ ಅನುಮಾನ ಬಂದಿತ್ತು.ನೀಲವೇಣಿ-ಆನಂದ್ ನಡುವಿನ ಸಂಬಂಧದ ವಿಚಾರವಾಗಿ ಪತಿ ವೆಂಕಟೇಶ್ ಜಗಳ ತೆಗೆದಿದ್ದ. ಶುಕ್ರವಾರ ರಾತ್ರಿಯೇ ಆನಂದ್ಗೆ ಪತಿ ವೆಂಕಟೇಶ್ನನ್ನ ಕೊಂದುಬಿಡುವಂತೆ ನೀಲವೇಣಿ ಸುಪಾರಿ ಕೊಟ್ಟಿದ್ದಳು. ಬಳಿಕ ಆನಂದ್ ತನ್ನ ಸ್ನೇಹಿತರ ಜೊತೆ ಚರ್ಚೆ ಮಾಡಿ ಕೊಲೆ ಪ್ಲಾನ್ ಮಾಡಿದ್ದ.ಆನಂದ್ ಮತ್ತು ಗ್ಯಾಂಗ್ ಕೊಂದು ಹಾಕಿದ್ದು, ತನಿಖೆ ವೇಳೆ ನೀಲವೇಣಿ ಕಳ್ಳಾಟಗಳೆಲ್ಲ ಬಯಲಾಗಿದೆ. ಅಂದು ಗಂಡನ ಶವದ ಮುಂದೆ ಅತ್ತು, ನವರಂಗಿ ಆಟ ಆಡಿದ್ದ ನೀಲವೇಣಿ ಮತ್ತು ಆನಂದ್ ಸೇರಿದಂತೆ ಒಟ್ಟು 11 ಜನ ಅರೆಸ್ಟ್ ಆಗಿದ್ದಾರೆ
