ರಿವಾಲ್ವಾರ್ ಸೌಂಡ್ ಡಂಡಂ: ಹುಬ್ಬಳ್ಳಿಯ ರೌಡಿಗಳ ಎದೆಯಲ್ಲಿ ಜುಮ್ಮ..ಜುಮ್ಮ
ಹುಬ್ಬಳ್ಳಿ: ವಾಣಿಜ್ಯನಗರಿ ಹುಬ್ಬಳ್ಳಿಯಲ್ಲಿ ಮತ್ತೆ ಪೊಲೀಸ್ ಗನ್ ಸದ್ದು ಮಾಡಿದೆ. ರೌಡಿ ಶಿಟರ್ ಕಾಲಿಗೆ ಗುಂಡು ಹಾರಿಸಿದ ಘಟನೆ ಆನಂದನಗರದ ಹೊರ ವಲಯದಲ್ಲಿ ನಡೆದಿದೆ.ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿದ
ರೌಡಿಶೀಟರ್ ಗೆ ಗುಂಡೇಟಿನ ರುಚಿ ತೋರಿಸಲಾಗಿದೆ. ರೌಡಿಶೀಟರ್ ಶಿಟರ್ ಮಲಿಕ್ ಆಧೋನಿ ಕಾಲಿಗೆ ಗುಂಡು ಹಾರಿಸಲಾಗಿದೆ. ಆನಂದನಗರದ ಹೊರವಲಯದಲ್ಲಿ ನಡೆದ ಗ್ಯಾಂಗ್‌ವಾರ್ ಪ್ರಕರಣದ ವಿಚಾರಣೆ ವೇಳೆ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿ ಮೇಲೆ ದಾಳಿ ಮಾಡಲು ಪ್ರಯತ್ನಿಸಿದ ಮಲಿಕ್ ಮೇಲೆ ಫೈರಿಂಗ್ ಮಾಡಲಾಗಿದೆ.ಇನ್ನೂ ಪೊಲೀಸರ ಮೇಲೆಯೇ ಹಲ್ಲೆ ಮಾಡುವ ವೇಳೆ ಗಾಳಿಯಲ್ಲಿ ಮೂರು ಸುತ್ತು ಬಳಿಕ ಮಲಿಕ್ ಕಾಲಿಗೆ ಗುಂಡು ಹಾರಿಸಲಾಗಿದೆ. ಘಟನೆಯಲ್ಲಿ ಪಿಎಸ್ ಐ ವಿಶ್ವನಾಥ್, ಕಾನ್ಸ್ಟೆಬಲ್ ಕಲ್ಲನಗೌಡ, ಶರಿಫ್‌ಗೆ ಗಾಯಗಳಾಗಿವೆ.