ಸೋನಿಪತ್‌ನಲ್ಲಿರುವ ಖಾಸಗಿ ವಿಶ್ವವಿದ್ಯಾಲಯದ ಹಾಸ್ಟೆಲ್ ನಲ್ಲಿ ಈ ಘಟನೆ ನಡೆದಿದ್ದು ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.ಇಲ್ಲಿನ ಕಾಲೇಜಿನಲ್ಲಿ ಓದುತ್ತಿರುವ ವಿದ್ಯಾರ್ಥಿ ತನ್ನ ಹಾಸ್ಟೆಲ್ ಗೆ ತನ್ನ ಗೆಳತಿಯನ್ನು ಯಾರಿಗೂ ಗೊತ್ತಾಗದ ರೀತಿಯಲ್ಲಿ ಕರೆದುಕೊಂಡು ಬರುವ ಪ್ಲಾನ್ ಮಾಡಿದ್ದಾನೆ ಅದರಂತೆ ದೊಡ್ಡ ಸೂಟ್‌ಕೇಸ್ ಒಳಗೆ ಗೆಳತಿಯನ್ನು ಕೂರಿಸಿ ಹಾಸ್ಟೆಲ್ ಗೆ ಕರೆದುಕೊಂಡು ಬಂದಿದ್ದಾನೆ ಈ ವೇಳೆ ಹಾಸ್ಟೆಲ್ ಸಿಬ್ಬಂದಿ ಬಳಿ ಸೂಟ್‌ಕೇಸ್ ಕೊಂಡೊಯ್ಯುವ ವೇಳೆ ಗೆಳತಿ ಕಿರುಚಿದ್ದಾಳೆ ಈ ಸದ್ದು ಕೇಳಿದ ಸಿಬ್ಬಂದಿ ಅನುಮಾನಗೊಂಡು ಯುವಕನ ಜೊತೆಗೆ ಇದ್ದ ಸೂಟ್‌ಕೇಸ್ ಒಳಗೆ ಏನಿದೆ ಅದನ್ನು ತೆರೆಯಲು ಹೇಳಿದ್ದಾರೆ, ಇದರಿಂದ ಬೆದರಿದ ಯುವಕ ಮೊದಲು ಇದರಲ್ಲಿ ಏನಿಲ್ಲ ನನ್ನ ಬಟ್ಟೆಗಳು ಎಂದು ಸಿಬ್ಬಂದಿ ಬಳಿ ಸುಳ್ಳು ಹೇಳಿದ್ದಾನೆ ಆದರೂ ಅನುಮಾನಗೊಂಡ ಹಾಸ್ಟೆಲ್ ಸಿಬ್ಬಂದಿಗಳು ಸೂಟ್‌ಕೇಸ್ ತೆರೆಯುವಂತೆ ಹೇಳಿದ್ದಾರೆ ಇದಕ್ಕೆ ಒಪ್ಪದೇ ಇದ್ದಾಗ ಸಿಬ್ಬಂದಿಗಳೇ ಹೋಗಿ ಸೂಟ್‌ಕೇಸ್ ಓಪನ್ ಮಾಡಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

