ಬಾಲಕಿಯ ಮೃತದೇಹವನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ರವಾನಿಸಿ, ಮರಣೋತ್ತರ ಪರೀಕ್ಷೆ ನಡೆಸಲಾಯಿತು. ಘಟನಾ ಸ್ಥಳದಲ್ಲಿ ಮಹಜರು ನಡೆಸಿದ್ದು, ಬಾಲಕಿಯ ತಂದೆ ಸೇರಿ ಐವರು ಪಂಚರ ಸಾಕ್ಷಿಯೊಂದಿಗೆ ಪೊಲೀಸರು ಮಹಜರು ಕಾರ್ಯ ನಡೆಸಿದ್ದಾರೆ.ಮನೆಗೆ ಕರೆತಂದು ಕೆಲ ನಿಮಿಷಗಳ ಕಾಲ ಬಾಲಕಿಯ ಮೃತದೇಹವನ್ನು ಅಂತಿಮ ದರ್ಶನಕ್ಕಾಗಿ ಇರಿಸಲಾಗಿತ್ತು. ಬಳಿಕ ಮನೆಯ ಹೊರಗಡೆ ಕುಟುಂಬಸ್ಥರು ಪೂಜೆ ನೆರವೇರಿಸಿದರು. ನಂತರ ನಗರದ ದೇವಾಂಗಪೇಟೆ ರುದ್ರಭೂಮಿಯಲ್ಲಿ ಕುರುಬ ಸಮಾಜದ ವಿಧಿ ವಿಧಾನಗಳಂತೆ, ಬಾಲಕಿಯ ಅಂತ್ಯ ಸಂಸ್ಕಾರ ನಡೆದಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

