ಜೈಲಿನಿಂದಲೇ ವಿಧ್ವಂಸಕ ಕೃತ್ಯಕ್ಕೆ ಸಂಚು ರೂಪಿಸಿದ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿರುವ ಶಂಕಿತರ ಸಂಚಿನ ಒಂದೊಂದೇ ಸ್ಫೋಟಕ ಮಾಹಿತಿಗಳು ಎನ್ಐಎ ತನಿಖೆಯಲ್ಲಿ ಬೆಳಕಿಗೆ ಬರುತ್ತಿವೆ.ಆರೋಪಿ 10-15 ಸಾವಿರ ರೂ.ಗಳ ಮೊಬೈಲ್ ಅನ್ನು 30-35 ಸಾವಿರ ರೂ.ಗಳಿಗೆ ಮಾರಾಟ ಮಾಡುತ್ತಿದ್ದ. ಸದ್ಯ ಆರೋಪಿ 90 ಮೊಬೈಲ್ ಖರೀದಿಸಿರುವುದಕ್ಕೆ ಡಿಜಿಟಲ್ ಸಾಕ್ಷ್ಯಗಳು ಸಿಕ್ಕಿವೆ. ಈ ರೀತಿ ಸಂಪಾದನೆ ಮಾಡಿರುವ ಲಕ್ಷಾಂತರ ರೂ.ಗಳನ್ನು ಆತ ತನ್ನ ಗೆಳತಿ ಪಲ್ಲವಿಯ ಬ್ಯಾಂಕ್ ಖಾತೆಗೆ ವರ್ಗಾಯಿಸಿದ್ದಾನೆ. ಪಲ್ಲವಿ ಖಾಸಗಿ ಆಸ್ಪತ್ರೆಯ ನರ್ಸ್ ಆಗಿದ್ದು, ಆಕೆ ಜತೆ ಆತ್ಮೀಯತೆ ಬೆಳೆದ ಬಳಿಕ ತನ್ನ ಸಹಾಯಕಿಯಾಗಿ ನೇಮಿಸಿಕೊಂಡಿದ್ದ ಎಂದು ಮೂಲಗಳು ತಿಳಿಸಿವೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

