Breaking News

ಕಾಮಗಾರಿ ವೇಳೆ ಭೀಕರ ದುರಂತ: ಆಟೋ ಚಾಲಕ ಸಾವು!!

ಯಲಹಂಕದ ಕೋಗಿಲು ಕ್ರಾಸ್ ಬಳಿ ನಡೆದ ಈ ಅಪಘಾತದಲ್ಲಿ ಆಟೋ ಚಾಲಕ ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ. ಬೃಹತ್ ವೈಯಾಡೆಕ್ಟ್ ಸಾಗಿಸುತ್ತಿದ್ದ ಲಾರಿ ತಿರುವು ಪಡೆಯುವ ವೇಳೆ ಅತಿಯಾದ ಓವರ್‌ಲೋಡ್ ಅಥವಾ ನಿರ್ಲಕ್ಷ್ಯದ ಕಾರಣದಿಂದಾಗಿ ವೈಯಾಡೆಕ್ಟ್ ನೆಲಕ್ಕುರುಳಿದಿದ್ದು, ಪಕ್ಕದಲ್ಲೇ ನಿಂತಿದ್ದ ಆಟೋ ಮೇಲೆ ಬಿದ್ದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ.ಆಟೋ ಚಾಲಕ ಕಾಸಿಂ ಸಾಬ್ ಎಂಬುವವರು ಈ ದುರಂತದಲ್ಲಿ ಸಾವನ್ನಪ್ಪಿದ ದುರ್ದೈವಿ. ಘಟನೆ ಮಧ್ಯರಾತ್ರಿ ಸುಮಾರು 12 ಗಂಟೆ ಸುಮಾರಿಗೆ ನಡೆದಿದೆ.ಈ ಕುರಿತು ಯಲಹಂಕ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಪತ್ತೆಗೆ ಬಲೆ ಬೀಸಿದ್ದಾರೆ. ಇಂದು ಸ್ಥಳೀಯರು ಮತ್ತು ಸಂಬಂಧಿತ ಸಂಘಟನೆಗಳು ಘಟನಾ ಸ್ಥಳದಲ್ಲಿ ಪ್ರತಿಭಟನೆ ನಡೆಸಲು ನಿರ್ಧರಿಸಿದ್ದು, ಬಿಎಂಆರ್ಸಿಎಲ್ ಹಾಗೂ ಎನ್‌ಸಿಸಿ ಕಂಪನಿಯಿಂದ ಸೂಕ್ತ ಪರಿಹಾರ ನೀಡುವಂತೆ ಆಗ್ರಹಿಸಿದ್ದಾರೆ.

Share News

About BigTv News

Check Also

ಆನ್‌ಲೈನ್ ಆಯಪ್‌ನಲ್ಲಿ ಸಾಲ ಪಡೆದ ಮಹಿಳೆಗೆ ಫೋಟೋ ಮಾರ್ಫಿಂಗ್ ಬೆದರಿಕೆ – ₹2.90 ಲಕ್ಷ ವಂಚನೆ!

ಮಂಗಳೂರು: ಆನ್‌ಲೈನ್ ಆಯಪ್ ಮೂಲಕ ಸಾಲ ಪಡೆದ ಮಹಿಳೆಯೊಬ್ಬರಿಗೆ ಫೋಟೋ ಮಾರ್ಫ್ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವುದಾಗಿ ಬೆದರಿಸಿ ₹2.90 …

Leave a Reply

Your email address will not be published. Required fields are marked *