ನವದೆಹಲಿ: ನಾನಾ ಪಾಟೇಕರ್ ವಿರುದ್ಧ ಲೈಂಗಿಕ ಕಿರುಕುಳದ ಆರೋಪಗಳನ್ನು ಮಾಡಿರುವ ತನುಶ್ರೀ ದತ್ತಾ ಈಗ ಮತ್ತೊಂದು ಬಾಂಬ್ ಸಿಡಿಸಿದ್ದಾರೆ. ಈಗ, ಪ್ರಮುಖ ದೈನಿಕವೊಂದಕ್ಕೆ ಸಂದರ್ಶನವೊಂದರಲ್ಲಿ ತನುಶ್ರೀ ಚಿತ್ರದ ಸಮಯದಲ್ಲಿ ಚಾಕೊಲೇಟ್ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಅವರು ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಹೇಳಿದ್ದಾರೆ.
ನಾನು ನನ್ನ ವೇಷದ ಜೊತೆಗೆ ಒಂದು ಟವಲ್ ಧರಿಸಿ ಕ್ಯಾಮರಾ ಹಿಂಬಾಲಿಸುತ್ತಿದ್ದೆ, ಈ ವ್ಯಕ್ತಿ (ವಿವೇಕ್ ಅಗ್ನಿಹೋತ್ರಿ) ನಟ (ಇರ್ಫಾನ್) ಗೆ ಸೂಚನೆಗಳನ್ನು ನೀಡಲು ಬಯಸಿದ್ದರು.ಇದು ನಟನ ಕ್ಲೋಸ್ ಅಪ್ ಶಾಟ್ ಆಗಿತ್ತೆ ಹೊರತು ನನ್ನದು ಆಗಿರಲಿಲ್ಲ, ಮತ್ತು ಆ ಶಾಟ್ ಗೆ ಕೂಡ ನಾನು ಹೋಗಿರಲಿಲ್ಲ,ಅದು ನಟನ ಕ್ಲೋಸ್ ಅಪ್ ಶಾಟ್ ಆಗಿತ್ತು ಆಗ ಆ ನಿರ್ದೇಶಕ ವಿಚಿತ್ರವಾಗಿ ನೋಡುತ್ತಾ.,’ಜಾವೊ ಜಾಕೆ ಕಪ್ಡೆ ಉತಾರ್ ಕೆ ನಾಚ್, ಉಸ್ಕೋ ಕ್ಯೂ ದೋ ( ಹೋಗು ಬಟ್ಟೆ ಕಳಚಿ ಅವನಿಗೆ ಕ್ಯೂ ಕೊಡು” ಎಂದು ಆ ನಿರ್ದೇಶಕ ಹೇಳಿದ್ದ ಎಂದು ತನುಶ್ರೀ ದತ್ತಾ ಹೇಳಿದ್ದಾಳೆ.
ಇದರ ಮಧ್ಯ ತನುಶ್ರೀ ದತ್ತಾ ರಕ್ಷಣೆಗೆ ಧಾವಿಸಿದ ನಟ ಇರ್ಫಾನ್ ಖಾನ್ ‘ಅವಳ ಕೋಟ್ ತೆಗೆದುಹಾಕುವುದು ಮತ್ತು ಆ ರೀತಿ ಡ್ಯಾನ್ಸ್ ಮಾಡಿ ಮುಖ ಭಾವನೆ ವ್ಯಕ್ತಪಡಿಸುವುದು ನನಗೆ ಅಗತ್ಯವಿಲ್ಲ ಎಂದು ಹೇಳಿದ್ದರು ಇದರಿಂದ ನಾನು ನಿಜವಾಗಿಯೂ ಇರ್ಫಾನ್ ಖಾನ್ ಬಗ್ಗೆ ಮೆಚ್ಚುಗೆ ಹೊಂದಿದ್ದೇನೆ ಎಂದು ತನುಶ್ರೀ ತಿಳಿಸಿದ್ದಾರೆ. 2008 ರಲ್ಲಿ ನಾನಾ ಪಟೇಕರ್ ಘಟನೆಯ ನಂತರ ತನುಶ್ರೀ ತಮ್ಮ ನಟನಾ ವೃತ್ತಿಜೀವನಕ್ಕೆ ವಿದಾಯ ಹೇಳಿದರು.
bigtvnews | Hubli Dharwad News | Kannada News | Karnataka News Hubli News | News In Hubli | Local news





