Breaking News

ಸುಮಲತಾ ಅವರ ಧಾರವಾಡದ ವಿಶೇಷ ಅಭಿಮಾನಿಗೂ ಬಂತು ಅಭಿಷೇಕ ಆರತಕ್ಷತೆ ಆಮಂತ್ರಣ

ಅದ್ಧೂರಿಯಾಗಿ ವಿವಾಹ ಮಾಡಿಕೊಂಡಿರುವ ಸುಮಲತಾ ಅಂಬರೀಷ್ ಅವರ ಪುತ್ರ ಅಭಿಷೇಕ

ನಾಳೆ ಬೆಂಗಳೂರಿನ ಪ್ಯಾಲೇಸ್ ಗ್ರೌಂಡ್‌ನಲ್ಲಿ ನಡೆಯಲಿರುವ ತಮ್ಮ ಆರತಕ್ಷತೆಗೆ ಅಭಿಮಾನಿಗೆ ಆಹ್ವಾನ ಮಾಡಿದ್ದಾರೆ

ಹೌದು! ನೀವು ದೃಶ್ಯಗಳಲ್ಲಿ ನೋಡುತ್ತಿರುವ ಈ ಬಾಲಕಿ ಹೆಸರು ಸೌಭಾಗ್ಯ ಯಮನೂರ. ಈಕೆ ಹುಟ್ಟುತ್ತಲೇ ವಿಶೇಷ ಚೇತನಳು ಆದರೆ ಸುಮಲತಾ ಅಂಬರೀಷ್ ಅವರ ಅಪ್ಪಟ ಅಭಿಮಾನಿಯಾಗಿದ್ದಾರೆ.. ಪತ್ರಿಕೆಗಳಲ್ಲಿ ಬರುವ ಸುಮಲತಾ ಅವರ ಫೋಟೋಗಳನ್ನು ಕಟ್ ಮಾಡಿಟ್ಟುಕೊಳ್ಳುತ್ತಾಳೆ.

ಅಲ್ಲದೇ ತಾನು ಸುಮಲತಾ ಅಂಬರೀಷ್ ಅವರ ಅಭಿಮಾನಿ ಎಂದು ಬರೆಯುತ್ತಾಳೆ. ಹುಟ್ಟುತ್ತಲೇ ವಿಶೇಷ ಚೇತನ ಮಗುವಾಗಿ ಹುಟ್ಟಿದ ಈಕೆ, ಅಂಬರೀಷ್ ಅವರು ನಿಧನರಾದಾಗ ಸುಮಲತಾ ಕಣ್ಣೀರಿಟ್ಟಿದ್ದನ್ನು ಕಂಡು ತಾನೂ ಕಣ್ಣೀರಿಟ್ಟಿದ್ದಳು.

ಅಂದಿನಿಂದ ಸುಮಲತಾ ಅವರ ಅಭಿಮಾನಿಯಾಗಿರುವ ಈಕೆ, ಪತ್ರಿಕೆಗಳಲ್ಲಿ ಬರುವ ಸುಮಲತಾ ಅವರ ಫೋಟೋಗಳನ್ನು ಕಟ್ ಮಾಡಿಟ್ಟುಕೊಂಡು ಒಂದು ಬುಕ್‌ನಲ್ಲಿ ಅಂಟಿಸುತ್ತಾಳೆ… ಇದು ಆಕೆಗೆ ಹವ್ಯಾಸ ಕೂಡ ಆಗಿದೆ. ಈಕೆಯ ಈ ಅಭಿಮಾನಕ್ಕೆ ಸುಮಲತಾ ಅಂಬರೀಷ್ ಕೂಡ ಮನಸೋತಿದ್ದಾರೆ. ಅಲ್ಲದೇ ತಮ್ಮ ಮಗ ಅಭಿಷೇಕ ಅವರ ಆರತಕ್ಷತೆಗೆ ಬರುವಂತೆ ಕರೆ ಮಾಡಿ ಹೇಳಿದ್ದಾರೆ. ಆಮಂತ್ರಣ ನೀಡಿದ್ದಾರೆ

ನಾಳೆ ನಡೆಯಲಿರುವ ಅಭಿಷೇಕ ಅವರ ಆರತಕ್ಷತೆಗೆ ಸೌಭಾಗ್ಯ ಜೊತೆ ಅವರ ತಂದೆ, ತಾಯಿ ಕೂಡ ಹೊರಟಿದ್ದಾರೆ. ಸುಮಲತಾ ಅವರನ್ನು ನೋಡಬೇಕು ಎನ್ನುವ ಸೌಭಾಗ್ಯಳ ಕನಸು ನಾಳೆ ನನಸಾಗಲಿದೆ. ಅಲ್ಲದೇ ಸೌಭಾಗ್ಯ ಧಾರವಾಡದಿಂದ ಸುಮಲತಾ ಅವರಿಗೆ ಧಾರವಾಡ ಸೀರೆ, ಪೇಡಾವನ್ನು ಉಡುಗೊರೆಯಾಗಿ ತೆಗೆದುಕೊಂಡು ಹೋಗುತ್ತಿದ್ದಾಳೆ.

ಒಟ್ಟಾರೆ ಈ ವಿಶೇಷ ಚೇತನ ಅಭಿಮಾನಿಗೆ ಮನಸೋತಿರುವ ಸುಮಲತಾ ನಾಳೆ ತಮ್ಮ ಮಗನ ಆರತಕ್ಷತೆಯಲ್ಲಿ ಸೌಭಾಗ್ಯಳನ್ನು ಭೇಟಿ ಮಾಡಲಿದ್ದಾರೆ. ಆ ಮೂಲಕ ಸೌಭಾಗ್ಯಳ ಬಹುದಿನದ ಕನಸನ್ನು ಸುಮಲತಾ ನನಸಾಗಿಸಲು ಮುಂದಾಗಿದ್ದಾರೆ

Share News

About BigTv News

Check Also

ಕಾನೂನು ರಕ್ಷಕನೇ ಭಕ್ಷಕ..! ಪೋಕ್ಸೊ ಪ್ರಕರಣದಲ್ಲಿ ಪಿಎಸ್‌ಐ ಬಂಧನ…

ಅಪ್ರಾಪ್ತೆಗೆ ಲೈಂಗಿಕ ಕಿರುಕುಳ ಆರೋಪ: ಪೋಕ್ಸೊ ಪ್ರಕರಣದಲ್ಲಿ ಪೊಲೀಸ್ ಅಧಿಕಾರಿಯ ಬಂಧನ, ಭಟ್ಕಳ: ಸಾರ್ವಜನಿಕರ ರಕ್ಷಣೆ ಮಾಡಬೇಕಿದ್ದ ಪೊಲೀಸ್ ಅಧಿಕಾರಿಯೊಬ್ಬನೇ …

Leave a Reply

Your email address will not be published. Required fields are marked *