ಜಮ್ಮು ಮತ್ತು ಕಾಶೀರದ ರಾಂಬನ್ ಜಿಲ್ಲೆಯ ಚೆನಾಬ್ ನದಿಯ ಸಮೀಪವಿರುವ ಧರ್ಮಕುಂಡ್ ಗ್ರಾಮದಲ್ಲಿ ಶನಿವಾರ ರಾತ್ರಿ ಸುರಿದ ತೀವ್ರ ಮಳೆಯಿಂದ ಉಂಟಾದ ಪ್ರವಾಹವು ಮೂರು ಜೀವಗಳನ್ನು ಬಲಿ ತೆಗೆದುಕೊಂಡಿದ್ದು, ಓರ್ವ ವ್ಯಕ್ತಿ ಕಾಣೆಯಾಗಿರುವ ಘಟನೆ ಸಂಭವಿಸಿದೆ.ರಾಷ್ಟ್ರೀಯ ಹೆದ್ದಾರಿಯನ್ನು ನಿರ್ಬಂಧಿಸಲಾಗಿದೆ ಮತ್ತು ದುರ ದೃಷ್ಟವಶಾತ್, ಮೂರು ಸಾವುನೋವುಗಳು ಮತ್ತು ಆಸ್ತಿ ನಷ್ಟವಾಗಿದೆ ಎಂದು ಸಿಂಗ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.ಜಿಲ್ಲಾಧಿಕಾರಿ ಬಷೀರ್-ಉಲ್-ಹಕ್ ಚೌಧರಿ ಅವರೊಂದಿಗೆ ನಿರಂತರ ಸಂಪರ್ಕದಲ್ಲಿದ್ದಾರೆ.ಸಂತ್ರಸ್ತ ಕುಟುಂಬಗಳಿಗೆ ಹಣಕಾಸಿನ ನೆರವು ಸೇರಿದಂತೆ ಎಲ್ಲಾ ಅಗತ್ಯ ನೆರವು ನೀಡಲಾಗುತ್ತಿದೆ, ಅಗತ್ಯವಿದ್ದಲ್ಲಿ, ನನ್ನ ವೈಯಕ್ತಿಕ ಸಂಪನೂಲಗಳಿಂದಲೂ ಹೆಚ್ಚಿನ ನೆರವು ನೀಡಲು ಸಿದ್ಧನಿದ್ದೇನೆ. ಯಾರು ಕೂಡಾ ಅನಗತ್ಯವಾಗಿ ಭಯಪಡಬಾರದು. ನಾವೆಲ್ಲರೂ ಒಟ್ಟಾಗಿ ಈ ನೈಸರ್ಗಿಕ ವಿಕೋಪವನ್ನು ಜಯಿಸೋಣ ಎಂದು ಸಚಿವರು ಆಭಯ ನೀಡಿದ್ದಾರೆ.
